ಕೋಲಾರ: ದೇಶದ ವಿರುದ್ದ ಕೆಲಸ ಮಾಡುತ್ತಿರುವಂಥ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ವಿಚಾರಕ್ಕೆ ದನಿಗೂಡಿಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ದೇಶದಲ್ಲಿರುವ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಿ: ಸಂಸದ ಎಸ್.ಮುನಿಸ್ವಾಮಿ
ಎಸ್.ಡಿ.ಪಿ.ಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳನ್ನು ನಿಷೇಧಿಸಲು ನನ್ನ ಸಹಮತವಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಡಿ.ಪಿ.ಐ ಹಾಗೂ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಮೊದಲಿನಿಂದಲೂ ದೇಶದ ವಿರುದ್ದ ಕೆಲಸ ಮಾಡಿಕೊಂಡು ಬಂದಿದೆ. ಇದೀಗ ಈ ಸಂಘಟನೆಗಳ ಉಪಟಳ ಹೆಚ್ಚಾಗಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದನ್ನು ಬಂಧಿತರೇ ಬಹಿರಂಗಪಡಿಸಿದ್ದಾರೆ.ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ಕೋಲಾರ ಮೂಲದ ಇಬ್ಬರು ಯುವಕರಿದ್ದಾರೆ. ನಮ್ಮ ಜಿಲ್ಲೆಯ ಯುವಕರು ಈ ರೀತಿ ಅಡ್ಡದಾರಿ ಹಿಡಿಯುವುದನ್ನು ಬಿಟ್ಟು ದೇಶಕ್ಕೋಸ್ಕರ ಚಿಂತನೆ ಮಾಡಬೇಕು ಮುನಿಸ್ವಾಮಿ ಹೇಳಿದರು.