ಕರ್ನಾಟಕ

karnataka

ETV Bharat / state

ಆನೆಗಳ ಹಾವಳಿಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ - kolar crop destroyed

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಆಂದ್ರ ಗಡಿಯಲ್ಲಿನ ದಿನ್ನೂರು, ಬೂದಿಕೋಟೆ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.

kolar
ಬೆಳೆ ನಾಶ

By

Published : Jan 11, 2020, 6:28 AM IST

ಕೋಲಾರ: ಕಳೆದೊಂದು ವಾರದಿಂದ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಆಂದ್ರ ಗಡಿಯ ದಿನ್ನೂರು, ಬೂದಿಕೋಟೆ ಗ್ರಾಮಗಳ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾಗಿದೆ.

ಕರ್ನಾಟಕ- ಆಂಧ್ರ ಗಡಿಯಲ್ಲಿ ಆನೆಗಳ ಹಾವಳಿಗೆ ಬೆಳೆ ನಾಶ

ಸುಮಾರು ಹತ್ತಕ್ಕೂ ಹೆಚ್ಚು ಆನೆಗಳ ಹಿಂಡು ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿದ್ದು, ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಗಡಿಯಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು, ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಿವೆ.

ಟೊಮ್ಯಾಟೊ, ಪಪ್ಪಾಯ, ಬೀನ್ಸ್, ಭತ್ತ, ತೋಟಗಳಲ್ಲಿನ ಪಂಪು ಸೆಟ್​ಗಳಿಗೂ ಹಾನಿ ಮಾಡಿವೆ. ಆನೆಯ ದಾಳಿಯಿಂದ ರೈತರು ಕಂಗಾಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಆನೆ ಹಿಂಡು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದ ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

...view details