ಕರ್ನಾಟಕ

karnataka

ETV Bharat / state

ಕೋಲಾರದ ಗಡಿಭಾಗದಲ್ಲಿ ಮತ್ತೆ ಕಾಡಾನೆಗಳ ಉಪಟಳ: ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯ - ಬೀಮಗಾನಹಳ್ಳಿ ಗ್ರಾಮದ ರೈತ ಅನ್ವರ್ ಪಾಷಾ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದ ಬಳಿ ಮತ್ತೋರ್ವ ವ್ಯಕ್ತಿಯ ಮೇಲೆ ಆನೆಗಳ ಹಿಂಡು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

elephant-attack-on-man-in-kolara
ಕೋಲಾರದ ಗಡಿಭಾಗದಲ್ಲಿ ಮತ್ತೆ ಮುಂದುವರೆದ ಕಾಡಾನೆಗಳ ಉಪಟಳ

By

Published : Mar 4, 2020, 8:01 PM IST

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದ ಬಳಿ ಮತ್ತೋರ್ವ ವ್ಯಕ್ತಿಯ ಮೇಲೆ ಆನೆಗಳ ಹಿಂಡು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

ಬೀಮಗಾನಹಳ್ಳಿ ಗ್ರಾಮದ ರೈತ ಅನ್ವರ್ ಪಾಷಾ ಎಂಬುವರ ಮೇಲೆ ದಾಳಿ ನಡೆಸಿದ್ದು, ಗಾಯಾಳುವನ್ನ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನು ಕಳೆದ ಸೋಮವಾರವಷ್ಟೇ ಕಾಡಾನೆಗಳ ದಾಳಿಗೆ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿ ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿಂದ ಕೋಲಾರ ಗಡಿ ಗ್ರಾಮಗಳತ್ತ ಕಾಡಾನೆಗಳ ಉಪಟಳ‌ ಹೆಚ್ಚಾಗಿದ್ದು, ಲಕ್ಷಾಂತರ ಮೌಲ್ಯದ ಬೆಳೆಗಳನ್ನ ನಾಶಪಡಿಸುತ್ತಿವೆ‌.

ABOUT THE AUTHOR

...view details