ಕರ್ನಾಟಕ

karnataka

By

Published : Mar 25, 2020, 4:53 PM IST

ETV Bharat / state

ಕಾಡಾನೆಗಳ ಹಾವಳಿಗೆ ಮತ್ತೋರ್ವ ಸಾವು: ಗಜ ಪಡೆಯ ದಾಳಿಗೆ ತಿಂಗಳಲ್ಲಿ ನಾಲ್ವರು ಬಲಿ

ಒಂದೂವರೆ ತಿಂಗಳಿನಿಂದ ಕೋಲಾರದ ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿಗೆ ಬಲಿಯಾದ ರೈತರ ಸಂಖ್ಯೆ ನಾಲ್ಕಕ್ಕೇರಿದೆ. ಕಾಡಾನೆಗಳ ದಾಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿದ್ದು, ಇವನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಾಲ್ವರು ಬಲಿ
ನಾಲ್ವರು ಬಲಿ

ಕೋಲಾರ:ಒಂದೂವರೆ ತಿಂಗಳಿನಿಂದ ಗಡಿಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಇಂದು ಮತ್ತೋರ್ವ ರೈತ ಬಲಿಯಾಗಿದ್ದಾನೆ.

ಬಂಗಾರಪೇಟೆ ತಾಲೂಕು ದೇವರಗುಟ್ಟಳ್ಳಿ ಗ್ರಾಮದ ಮೂಗಪ್ಪ(55) ಆನೆ ದಾಳಿಯಿಂದ ಸಾವನ್ನಪ್ಪಿರುವ ರೈತ. ಒಂದೂವರೆ ತಿಂಗಳಿನಿಂದ ಆನೆಗಳ ಅಟ್ಟಹಾಸಕ್ಕೆ ಬಲಿಯಾದ ರೈತರ ಸಂಖ್ಯೆ ನಾಲ್ಕಕ್ಕೇರಿದೆ. ಈಗಾಗಲೇ ಕಾಡಾನೆಗಳ ಹಾವಳಿಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ಸಹ ನಾಶವಾಗಿದ್ದು, ಇವುಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಾರ್ಚ್ 2ರಂದು ಇದೇ ಕಾಡಾನೆಗಳ ದಾಳಿಗೆ ಸಿಲುಕಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಓಒರ್ವ ರೈತ ಸಾವನ್ನಪ್ಪಿದ್ದರು. ಬಳಿಕ ಇದೇ ತಿಂಗಳ 15 ರಂದು ಮತ್ತೋರ್ವ ರೈತ ಮೃತಪಟ್ಟಿದ್ದ. ಈಗ ಮತ್ತೊಮ್ಮೆ ಅಮಾಯಕ ರೈತ ಬಲಿಯಾಗಿರುವುದು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆನೆ ಕಾರಿಡಾರ್ ಮಾಡುವ ಮೂಲಕ ಈ ಹಾವಳಿ ನಿಯಂತ್ರಿಸಬೇಕಿದೆ. ಸರ್ಕಾರ ಹಾಗೂ ಇಲಾಖೆ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಮತ್ತಷ್ಟು ರೈತರು ಹಾಗೂ ಬೆಳೆಗಳ ಮೇಲೆ ದಾಳಿ ಮಾಡಿ ನಾಶ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details