ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಭೂಕಂಪನದ ಅನುಭವ.. ಜನರಲ್ಲಿ ಆತಂಕ - ಕೋಲಾರದಲ್ಲಿ ಭೂಕಂಪನದ ಅನುಭವದಿಂದಾಗಿ ಬೆಚ್ಚಿದ ಜನತೆ

ಕೆಜಿಎಫ್ ನಗರದಲ್ಲಿ ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

Kolar
ಜನರಲ್ಲಿ ಆತಂಕ

By

Published : Dec 21, 2020, 12:21 PM IST

ಕೋಲಾರ : ಜಿಲ್ಲೆಯ ಚಿನ್ನದ ಗಣಿ ಕೆಜಿಎಫ್ ನಗರದಲ್ಲಿ ಸುಮಾರು ಬೆಳಗ್ಗೆ 8:37 ಕ್ಕೆ ಮೂರು ಸೆಕೆಂಡ್​ಗಳವರೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಚಿನ್ನದ ಗಣಿಯಲ್ಲಿ ಸಾವಿರಾರು ಅಡಿ ಆಳವಿದ್ದು, ಅಲ್ಲಿ ನೀರು ತುಂಬಿಕೊಂಡಿದೆ. ಜೋರಾಗಿ ಗಾಳಿ ಬೀಸಿದಾಗ ಉಂಟಾಗುವ ಅಲೆಗಳಿಂದ ಕಂಪನವಾಗುವುದು ಸಹಜವಾಗಿದೆ. ಆದರೆ, ಇತ್ತೀಚೆಗೆ ಈ ರೀತಿಯ ಕಂಪನವಾಗಿರಲಿಲ್ಲ. ಭೂಮಿ ಕಂಪಿಸಿದ ಅನುಭವದಿಂದಾಗಿ ಜನರಲ್ಲಿ ಕೊಂಚ ಗಾಬರಿಯುಂಟಾಗಿದೆ.

ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಕೆಳಗೆ ಬಿದ್ದಿದ್ದು, ಸದ್ಯ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ABOUT THE AUTHOR

...view details