ಕೋಲಾರ: ಮದ್ಯಕ್ಕೆ ಮೊದಲಿದ್ದ ಬೇಡಿಕೆ ಸದ್ಯಕ್ಕಿಲ್ಲ, ಹಾಗಾಗಿ ಮೊದಲ ವಾರದ ಕಲೆಕ್ಷನ್ ಈಗಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಮದ್ಯಕ್ಕೆ ಮೊದಲಿದ್ದ ಬೇಡಿಕೆ ಈಗಿಲ್ಲ : ಅಬಕಾರಿ ಸಚಿವ ಎಚ್.ನಾಗೇಶ್
ಬಾರ್-ರೆಸ್ಟೋರೆಂಟ್ ಸೇರಿದಂತೆ ಲಾಡ್ಜ್ ಗಳಲ್ಲಿ ಮದ್ಯ ನಿಷೇಧ ಇರುವುದರಿಂದ ಆದಾಯ ಕಡಿಮೆ ಆಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾರ್-ರೆಸ್ಟೋರೆಂಟ್ ಸೇರಿದಂತೆ ಲಾಡ್ಜ್ ಗಳಲ್ಲಿ ಮದ್ಯ ನಿಷೇಧ ಇರುವುದರಿಂದ ಆದಾಯ ಕಡಿಮೆ ಆಗಿದೆ. ಆದರೆ ಕೊರೊನಾ ಲಾಕ್ ಡೌನ್ ಸಡಿಲಿಕೆ ನಂತರ ಮದ್ಯದಂಗಡಿಗಳು ತೆರೆದ ಸಂದರ್ಭದಲ್ಲಿ ಮೊದಲ ವಾರದಲ್ಲಿ ಹೆಚ್ಚಿನ ಆದಾಯ ಬಂದಿದೆ. ಇನ್ನು ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಆಗುತ್ತಿದ್ದು, ಮದ್ಯದಂಗಡಿ ಮುಚ್ಚಲು ನನ್ನ ಸಹಮತವಿದೆ ಎಂದು ಮಾಹಿತಿ ನೀಡಿದರು.
ಇದರ ಬಗ್ಗೆ ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನೋಡಬೇಕು. ಅವರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು. ಅಲ್ಲದೆ ಆಂಧ್ರ ಮತ್ತು ತಮಿಳುನಾಡು ಗಡಿಗಳಲ್ಲಿ ಮದ್ಯದಂಗಡಿ ತೆರೆಯದಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಮೇ 31 ರ ವರೆಗೆ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದೇನೆ ಎಂದು ತಿಳಿಸಿದರು.