ಮಾಲೂರು(ಕೋಲಾರ): ನಿಗೂಢವಾಗಿ ಸಾವನ್ನಪ್ಪಿದ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರ ಅಂತ್ಯ ಸಂಸ್ಕಾರವನ್ನು ಹುಟ್ಟೂರಾದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತುರುವಲ ಹಟ್ಟಿ ಗ್ರಾಮದ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಡಿವೈಎಸ್ಪಿ ಲಕ್ಷ್ಮೀ ಅಂತ್ಯಕ್ರಿಯೆ - ಕೋಲಾರ ಸುದ್ದಿ
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತುರುವಲ ಹಟ್ಟಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರ ಅಂತ್ಯಕ್ರಿಯೆ ನಡೆಯಿತು.
ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಡಿವೈಎಸ್ಪಿ ಲಕ್ಷ್ಮೀ ಅಂತ್ಯಕ್ರಿಯೆ
ಸಂಬಂಧಿ ಚಂದ್ರು ಎಂಬಾತ ವಿಧಿ ವಿಧಾನ ನಡೆಸಿದರು. ಡಿವೈಎಸ್ಪಿ ಲಕ್ಷ್ಮೀ ಅವರ ಪತಿ ನವೀನ್ ಅಂತಿಮ ವಿಧಿ ವಿಧಾನ ಪೂರೈಸಲು ಒಪ್ಪದ ಕಾರಣ ಚಂದ್ರು ಈ ಕಾರ್ಯವನ್ನು ಪೂರೈಸಿದರು. ಇದಕ್ಕೂ ಮೊದಲು ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಹಾಗೂ ಎಎಸ್ಪಿ ಜಾಹ್ನವಿ ಅಂತಿಮ ದರ್ಶನ ಪಡೆದರು. ಮಾಲೂರು ಶಾಸಕ ಕೆ.ವೈ.ನಂಜೆಗೌಡ ಅಂತಿಮ ದರ್ಶನ ಪಡೆದರು. ಮೃತ ಅಧಿಕಾರಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.