ಕರ್ನಾಟಕ

karnataka

ETV Bharat / state

ಕೋಲಾರ: ಟ್ರ್ಯಾಕ್ಟರ್​​​​ ಮುಗುಚಿ ಬಿದ್ದು ಚಾಲಕ ಸಾವು - Tractor falls

ಟ್ರ್ಯಾಕ್ಟರ್ ಮುಗುಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Tractor
Tractor

By

Published : Jun 19, 2020, 12:49 PM IST

ಕೋಲಾರ:ಹೊಲ ಉಳುಮೆ ಮಾಡಿ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಟ್ರ್ಯಾಕ್ಟರ್​​​ ಮುಗುಚಿ ಬಿದ್ದು, ಟ್ರ್ಯಾಕ್ಟರ್​​ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ಕೋಲಾರ ತಾಲೂಕಿನ ಎಚ್.ಮಲ್ಲಾಂಡಹಳ್ಳಿ ಗ್ರಾಮದಲ್ಲಿ ಈ ಘಟ‌ನೆ ಜರುಗಿದ್ದು, ಗ್ರಾಮದ ಅಶೋಕ್ (47) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ.

ಇನ್ನು ಅಶೋಕ್ ಟ್ರ್ಯಾಕ್ಟರ್ ಮಾಲೀಕನಾಗಿದ್ದು, ಇನ್ನು ಟ್ರ್ಯಾಕ್ಟರ್ ಚಾಲಕ ಕೆಲಸಕ್ಕೆ ಬಾರದ ಹಿನ್ನೆಲೆ. ತಮ್ಮ ಸ್ವಂತ ಜಮೀನನ್ನ ಉಳುಮೆ ಮಾಡುವ ಸಲುವಾಗಿ ತಾವೇ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಉಳುಮೆಗೆ ಮುಂದಾಗಿದ್ದ. ಇನ್ನು ತಮ್ಮ ಜಮೀನಿನಲ್ಲಿ ಉಳುಮೆ ಮುಗಿಸಿ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ,‌ ಟ್ರ್ಯಾಕ್ಟರ್ ಮುಗುಚಿ ಬಿದ್ದಿದ್ದು, ಟ್ರ್ಯಾಕ್ಟರ್ ಕೆಳಗೆ ಸಿಲುಕಿದ ಮಾಲೀಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details