ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣದ ಮೂಲಕ ಕುಡಿಯುವ ನೀರಿನ ಬಗ್ಗೆ ಅಪಪ್ರಚಾರ: ಡಿಸಿ ತಪಾಸಣೆ

ಕೆ ಸಿ ವ್ಯಾಲಿಯಲ್ಲಿ ಅಶುದ್ಧ ನೀರನ್ನು ಕೋಲಾರ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರಿನ ಗುಣಮಟ್ಟ ತಪಾಸಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಜಿ.ಮಂಜುನಾಥ

By

Published : May 22, 2019, 2:57 AM IST

ಕೋಲಾರ: ಬಯಲು ಸೀಮೆ ಜಿಲ್ಲೆ ಕೋಲಾರಕ್ಕೆ ಸ್ವಾತಂತ್ರ್ಯ ನಂತರ ಮಾಡಲಾದ ಮೊದಲ ನೀರಾವರಿ ಯೋಜನೆ ಅಂದರೆ ಅದು ಕೆ ಸಿ ವ್ಯಾಲಿ. ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ. ಈ ಯೋಜನೆಗೆ ಆರಂಭದಿಂದಲೂ ಸಾಕಷ್ಟು ವಿಘ್ನಗಳು ಎದುರಾಗುತ್ತಲೇ ಇದೆ.

ನೀರಿನ ಗುಣಮಟ್ಟ ತಪಾಸಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಜಿ.ಮಂಜುನಾಥ

ಈ ನೀರಿನ ಶುದ್ಧತೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಲಾಗಿತ್ತು. ಕೋರ್ಟ್​ ಎಲ್ಲವನ್ನು ಪರಿಶೀಲಿಸಿ ನೀರು ಹರಿಸಲು ಗ್ರೀನ್​ ಸಿಗ್ನಲ್​ ನೀಡಿತ್ತು. ಹೀಗಿದ್ದೂ ಕೂಡ ಮನ್ನೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆ ಸಿ ವ್ಯಾಲಿಯಲ್ಲಿ ಅಶುದ್ಧ ನೀರನ್ನು ಕೋಲಾರ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್​ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ, ಕೋಲಾರ ತಾಲೂಕು ಸಿಂಗೇಹಳ್ಳಿ, ನರಸಾಪುರ, ಮತ್ತು ಲಕ್ಷ್ಮೀಸಾಗರ ಕೆರೆಗಳಿಗೆ ಭೇಟಿನೀಡಿ ನೀರಿನ ಶುದ್ಧತೆಯನ್ನು ಪರಿಶೀಲಿಸಿದ್ರು.

ಈ ವೇಳೆ ನೀರಿನ ಗುಣಮಟ್ಟ ಉತ್ತಮವಾಗಿರುವುದು ಖಾತ್ರಿಯಾಯಿತು.ಅಲ್ಲದೆ ಪ್ರತಿದಿನ ನೀರಿನ ಗುಣಮಟ್ಟದ ಬಗ್ಗೆ ವೆಬ್​ಸೈಟ್​ನಲ್ಲೇ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ರು.

ABOUT THE AUTHOR

...view details