ಕೋಲಾರ :ಕೋವಿಡ್-19 ಕಾವು ಕುಡುಕರ ಜೀವಕ್ಕೂ ಮುಳ್ಳಾಗಿದೆ. ಮದ್ಯ ಸಿಗದ ಹಿನ್ನೆಲೆ ಮದ್ಯವೆಸನಿಗಳಿಬ್ಬರು ಆತ್ಮಹತ್ಯೆಗೆ ಮುಂದಾಗಿದ್ದರು. ಅದರಲ್ಲೊಬ್ಬ ಸಾವನ್ನಪ್ಪಿದ್ರೆ, ಇನ್ನೊಬ್ಬನ ಮದ್ಯವ್ಯಸನಿಯ ಸ್ಥಿತಿ ಚಿಂತಾಜನಕಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮದ್ಯ ಸಿಗಲಿಲ್ಲ ಎಂದು ಒಬ್ಬ ಆತ್ಮಹತ್ಯೆಗೆ ಶರಣಾದ, ಇನ್ನೊಬ್ಬ ಕುಡುಕ ಕತ್ತು ಕೊಯ್ದುಕೊಂಡ.. - ಕೊರೊನಾ ವೈರಸ್
ಎಣ್ಣೆ ಇಲ್ಲದಿದ್ರೇ ಆಗೋದೇ ಇಲ್ಲ ಅನ್ನೋ ಮದ್ಯವ್ಯಸನಿಗಳ ಪಾಡು ಯಾರಿಗೂ ಬೇಡ. ನಿತ್ಯ ಕುಡಿಯುತ್ತಿದ್ದವರಿಗೆ ಈಗ ಮದ್ಯ ಸಿಗದೇ ಬದುಕು ಬಲು ದುಸ್ಥರವಾಗಿದೆ. ಹಾಗಾಗಿ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ.
![ಮದ್ಯ ಸಿಗಲಿಲ್ಲ ಎಂದು ಒಬ್ಬ ಆತ್ಮಹತ್ಯೆಗೆ ಶರಣಾದ, ಇನ್ನೊಬ್ಬ ಕುಡುಕ ಕತ್ತು ಕೊಯ್ದುಕೊಂಡ.. drinker-died-in-kolar-district-because-of-not-getting-drink](https://etvbharatimages.akamaized.net/etvbharat/prod-images/768-512-6598970-thumbnail-3x2-drinkier.jpg)
ಆತ್ಮಹತ್ಯೆ ಯತ್ನಸಿದ ಮದ್ಯವೆಸನಿ
ಕೆಜಿಎಫ್ ತಾಲೂಕಿನ ದೊಡ್ದೂರು ಕರಪ್ಪನಹಳ್ಳಿ ಗ್ರಾಮದ ಆನಂದ್(30) ಮೃತ ದುರ್ದೈವಿ. ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಶಂಕರಪ್ಪ(36) ಎಂಬಾತ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನೊಬ್ಬ ಕುಡುಕ ಆನಂದ್ ಎಂಬಾತ ಗ್ರಾಮದ ಹೊರ ವಲಯದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಂಗಲಿ ಹಾಗೂ ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಈ ಎರಡೂ ಪ್ರಕರಣ ದಾಖಲಾಗಿವೆ.