ಕರ್ನಾಟಕ

karnataka

ETV Bharat / state

ಒಬ್ಬರೇ ಕಾರ್​ನಲ್ಲಿ ಹೋಗುವಾಗ ಮಾಸ್ಕ್​ ಕಡ್ಡಾಯವಲ್ಲ, ಬೈಕ್​ನಲ್ಲಿ ಹೋಗುವಾಗ ಕಡ್ಡಾಯ: ಸಚಿವ ಡಾ.ಸುಧಾಕರ್ - ಆರ್​.ಆರ್​ ನಗರ ಉಪ ಚುನಾವಣೆ

ಒಬ್ಬರೇ ಕಾರ್​ನಲ್ಲಿ ಹೋಗುವಾಗ ಮಾಸ್ಕ್​ ಕಡ್ಡಾಯವಲ್ಲ, ಆದ್ರೆ ಬೈಕ್​ ನಲ್ಲಿ ಹೋಗುವಾಗ ಮಾಸ್ಕ್​ ಹಾಕಿಕೊಳ್ಳಬೇಕು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

sudhakar
sudhakar

By

Published : Oct 28, 2020, 7:41 PM IST

ಕೋಲಾರ:ಬೆಂಗಳೂರಿನಲ್ಲಿ ಬಿಬಿಎಂಪಿಯವರು ಬೈಕ್ ಮತ್ತು ಕಾರಿನಲ್ಲಿ‌ ಒಬ್ಬರೇ ಹೋಗುವಾಗ ಕೂಡಾ‌ ಮಾಸ್ಕ್ ಕಡ್ಡಾಯ‌ ಮಾಡಿರುವ ಕುರಿತು ಕೋಲಾರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯಿಸಿ, ಒಬ್ಬರೇ ಕಾರ್​ನಲ್ಲಿ ಹೋಗುವಾಗ ಮಾಸ್ಕ್​ ಕಡ್ಡಾಯವಲ್ಲ, ಆದ್ರೆ ಬೈಕ್​ನಲ್ಲಿ ಹೋಗುವಾಗ ಮಾಸ್ಕ್​ ಹಾಕಿಕೊಳ್ಳಬೇಕು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ ಎಂದರು.

ಕೊರೊನಾ ವಾರಿಯರ್ಸ್‌ ಸುಮಾರು 8 ಗಂಟೆಗಳ ಕಾಲ‌ ಪಿಪಿಇ ಕಿಟ್​ಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ನಾವು ಮಾಸ್ಕ್ ಹಾಕುವುದರಲ್ಲಿ ತಪ್ಪಿಲ್ಲ. ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕಾಗಿದೆ ಎಂದು ತಿಳಿಸಿದರು.

ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ

ಆರ್​.ಆರ್​ ನಗರ ಉಪ ಚುನಾವಣೆ ಹಿನ್ನೆಲೆ ಡಿ.ಕೆ. ಸುರೇಶ್​ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ನನಗೆ ಗೊತ್ತಿರೋದು ಬಿಳಿ ರಕ್ತಕಣ ಹಾಗೂ ಕೆಂಪು ರಕ್ತಕಣ. ಕೇಸರಿ ರಕ್ತ ಕಣ ಇರೋದು ನನಗೆ ಗೊತ್ತಿಲ್ಲ. ಇನ್ನು
ಆರ್​ ಆರ್​ ನಗರದಲ್ಲಿ ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡರು ಮುನಿರತ್ನ ಅವರನ್ನು ಆಧುನಿಕ ದುಶ್ಯಾಸನ ಎಂದು ಟೀಕಿಸಿರುವುದಕ್ಕೆ‌ ನಾನು‌ ಮೊದಲಿನಿಂದಲೂ ವೈಯಕ್ತಿಕ ಟೀಕೆಗಳಿಗೆ ಉತ್ತರ ನೀಡುವುದಿಲ್ಲವೆಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಆದಷ್ಟು ಶೀಘ್ರವಾಗಿ ಆಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details