ಕರ್ನಾಟಕ

karnataka

ETV Bharat / state

ವರದಕ್ಷಿಣೆ ಕಿರುಕುಳ ಆರೋಪ: 9 ತಿಂಗಳ ಹಿಂದೆ ಮದುವೆ ಆಗಿದ್ದ ಮಹಿಳೆ ಆತ್ಮಹತ್ಯೆ - Dowry harassment

ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಗರ್ಭಿಣಿವೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ.

A Woman Committed Suicide
ನೇಣಿಗೆ ಶರಣಾದ ನವವಿವಾಹಿತೆ

By

Published : Sep 25, 2020, 4:30 PM IST

ಕೋಲಾರ:ಗರ್ಭಿಣಿವೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.

ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೇಘನಾ (22) ಆತ್ಮಹತ್ಯೆಗೆ‌ ಶರಣಾದವಳು. ದೊಡ್ಡಕಲ್ಲಹಳ್ಳಿಯ ಮಹೇಶ್ ಎಂಬಾತನೊಂದಿಗೆ ಒಂಬತ್ತು ತಿಂಗಳ ಹಿಂದೆ ವಿವಾಹವಾಗಿದ್ದು, ಮೇಘನಾ ವರದಕ್ಷಿಣೆ ಕಿರುಕುಳದಿಂದ ಬೇಸತ್ತಿದ್ದಳು ಎನ್ನಲಾಗ್ತಿದೆ‌. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮೃತಳ ಪೋಷಕರು ಕೊಲೆ ಆರೋಪ ಮಾಡುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮಾಸ್ತಿ‌ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತಳ ಪತಿ ಮಹೇಶ್ ಹಾಗೂ ಅಕೆಯ ಮಾವನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details