ಕರ್ನಾಟಕ

karnataka

ETV Bharat / state

ಸೃಷ್ಟಿಯ ಚಮತ್ಕಾರಕ್ಕೆ ಶರಣು: ಅಚ್ಚರಿ ಮೂಡಿಸಿದೆ ಒಂದೇ ದೇಹ ಎರಡು ತಲೆಯ ಮೇಕೆ ಮರಿ - two head goat

ಪರಿಸರ ಪ್ರಪಂಚ ವಿಸ್ಮಯಕಾರಿ ಸಂಗತಿಗಳ ತಾಣವಾಗಿದ್ದು, ತನ್ನ ಒಡಲಿನಲ್ಲಿ ಅನೇಕ ಚಮತ್ಕಾರಿ ಸಂಗತಿಗಳನ್ನು ಇಟ್ಟುಕೊಂಡು ಜನರನ್ನು ಬೆರಗುಗೊಳಿಸುತ್ತದೆ. ಜಿಲ್ಲೆಯಲ್ಲಿ ಎರಡು ತಲೆ, ಒಂದೇ ದೇಹ ಹೊಂದಿರುವ ಮೇಕೆ ಮರಿ ಜನಿಸಿರುವುದು ಅಪರೂಪವೆನಿಸಿದೆ.

different-got-born-in-kolar-balleri-village
ಎರಡು ತೆಲೆಯ ಮೇಕೆ ಮರಿ

By

Published : Mar 19, 2020, 5:14 PM IST

ಕೋಲಾರ: ಸೃಷ್ಟಿಯಲ್ಲಿ ಸದಾ ಒಂದಲ್ಲ ಒಂದು ವಿಸ್ಮಯಕಾರಿ ಸಂಗತಿಗಳು ಕಂಡುಬರುತ್ತವೆ. ಅದಕ್ಕೆ ಪೂರಕ ಎಂಬಂತೆ ಜಿಲ್ಲೆಯಲ್ಲಿ ಎರಡು ತಲೆಯ ಮೇಕೆ ಮರಿ ಜನಿಸಿ ಜನರನ್ನ ಚಕಿತಗೊಳಿಸಿದೆ.

ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಬಲ್ಲೇರಿ ಗ್ರಾಮದ ನಂಜುಂಡಪ್ಪ ಎಂಬ ರೈತನ ಮನೆಯಲ್ಲಿ ವಿಚಿತ್ರ ಮೇಕೆ ಮರಿಯೊಂದು ಜನಿಸಿದೆ. ಇದು ಎರಡು ತಲೆ, ನಾಲ್ಕು ಕಣ್ಣು ಹಾಗೂ ಒಂದೇ ದೇಹವನ್ನು ಹೊಂದಿದ್ದರಿಂದ ಜನ ನಿಬ್ಬೆರಗಾಗಿ ನೋಡುತ್ತಿದ್ದಾರೆ.

ಈ ವಿಚಿತ್ರ ಮೇಕೆ ಮರಿಯನ್ನು ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮೇಕೆ ಹಾಗೂ ಮರಿ ಎರಡೂ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಸದ್ಯ ಈ ಮೇಕೆ ಮರಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ABOUT THE AUTHOR

...view details