ಕರ್ನಾಟಕ

karnataka

ETV Bharat / state

ಕೋಲಾರ ಎಪಿಎಂಸಿ ಮಾರುಕಟ್ಟೆ ನೂತನ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್​ ಅಧಿಕಾರ ಸ್ವೀಕಾರ - APMC's new President Dhanamatnahalli Manjunath

ಕೋಲಾರ ಎಪಿಎಂಸಿ ಮಾರುಕಟ್ಟೆಗೆ ನೂತನ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್​ ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷರಾಗಿದ್ದ ವಡಗೂರು ನಾಗರಾಜ್​ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

Dhanamatnahalli Manjunat
ಎಪಿಎಂಸಿ ಮಾರುಕಟ್ಟೆ ನೂತನ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್​ ಅಧಿಕಾರ ಸ್ವೀಕಾರ

By

Published : Jun 16, 2020, 7:14 PM IST

ಕೋಲಾರ:ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು, ಇಂದು ನೂತನ ಎಪಿಎಂಸಿ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್​ ಅಧಿಕಾರ ಸ್ವೀಕರಿಸಿದರು.

ಎಪಿಎಂಸಿ ಮಾರುಕಟ್ಟೆ ನೂತನ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್​ ಅಧಿಕಾರ ಸ್ವೀಕಾರ
ಈ ಹಿಂದಿನ ಅಧ್ಯಕ್ಷರಾಗಿದ್ದ ವಡಗೂರು ನಾಗರಾಜ್​ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ನಿರ್ಗಮಿತ ಅಧ್ಯಕ್ಷರಾದ ವಡಗೂರು ನಾಗರಾಜ್​ ಮಾತನಾಡಿ, ಎಪಿಎಂಸಿ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ. ಇನ್ನು ಎಪಿಎಂಸಿ ನೂತನ ಪ್ರದೇಶಕ್ಕೆ ಸ್ಥಳಾಂತರ ಸೇರಿದಂತೆ ಕೆಲವೊಂದು ಪ್ರಮುಖ ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣ ಮಾಡಲಾಗಲಿಲ್ಲ ಎಂಬ ಬೇಸರ ಇದೆ ಎಂದರು. ಅಲ್ಲದೆ ಕೊರೊನಾ ಸಂದರ್ಭದಲ್ಲಿ ಕೈಗೊಂಡಂತಹ ಸೂಕ್ತ ಕ್ರಮಗಳ‌ ಕುರಿತು ಮಾಹಿತಿ ನೀಡಿದರು‌.

ಇನ್ನು ಕೊರೊನಾ ಸಂದರ್ಭದಲ್ಲಿ ಮಾರುಕಟ್ಟೆಗೆ ರೈತರು ಬರುವುದು ಬೇಡ. ದಿನೇ ದಿನೆ ಕೊರೊನಾದಿಂದ ಸಾವಿನ ಸಂಖ್ಯೆ ಏರುತ್ತಿರುವ ಪರಿಣಾಮ ರೈತರು ಮಾರುಕಟ್ಟೆಗೆ ಬರುವುದು ಬೇಡ . ರೈತರು ಮಾರುಕಟ್ಟೆಗೆ ಬರುವ ಬದಲು ತರಕಾರಿಯನ್ನ ಟೆಂಪೋ ಮೂಲಕ ಮಾರುಕಟ್ಟೆಗೆ ಕಳುಹಿಸಿ. ಕಳುಹಿಸಿರುವ ತರಕಾರಿಗಳಿಗೆ ಆನ್​ಲೈನ್ ಮೂಲಕ ರೈತರ ಅಕೌಂಟ್​​​ಗಳಿಗೆ ಹಣ ಕಳಿಸುವ ವ್ಯವಸ್ಥೆಯನ್ನು ನೂತನ ಅದ್ಯಕ್ಷರು ಮಾಡಬೇಕು ಎಂದು ಸಲಹೆ ನೀಡಿದರು.


ABOUT THE AUTHOR

...view details