ಕೋಲಾರ:ಕೊರೊನಾ ಎರಡನೇ ಅಲೆ ಮಧ್ಯೆ ಕೋಲಾರದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಓದಿ: ಕೊರೊನಾ ಸೋಂಕಿತರಿಗೆ ಉಚಿತ ಪೌಷ್ಟಿಕ ಆಹಾರ ನೀಡುತ್ತಿದೆ ಪ್ರೇರಣ ಯುವ ಸಂಸ್ಥೆ !
ಜಿಲ್ಲೆಯ ರೈತರ ಪಾಲಿಗೆ ಹೈನುಗಾರಿಕೆ ಜೀವನಾಡಿಯಾಗಿದೆ. ಕೊರೊನಾ ಸಂದರ್ಭದಲ್ಲಿ ರೈತರನ್ನ ಕೈಹಿಡಿದಿರುವುದು ಈ ಹೈನುಗಾರಿಕೆಯೇ, ಆದರೆ, ಜಿಲ್ಲಾದ್ಯಂತ ರಾಸುಗಳಿಗೆ ವಕ್ಕರಿಸಿರುವಂತಹ ಕಾಲುಬಾಯಿ ಜ್ವರದಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಕೋಲಾರ ಸೇರಿದಂತೆ ತಾಲೂಕುಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಕೋಲಾರ ತಾಲೂಕಿನ ವೇಮಗಲ್ ವ್ಯಾಪ್ತಿಯ ಪುರಹಳ್ಳಿ ಎಂಬ ಗ್ರಾಮವೊಂದರಲ್ಲಿಯೇ 30 ಹಸುಗಳಲ್ಲಿ ಜ್ವರ ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ಮೇವು ತಿನ್ನದೇ, ನೀರು ಕುಡಿಯದೇ ರಾಸುಗಳು ನರಳಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಇಷ್ಟೆಲ್ಲ ಅನಾಹುತ ರೈತರ ಬದುಕಿನಲ್ಲಿ ಆಗುತ್ತಿದ್ದರೂ, ರಾಸುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದರೂ, ಕೊರೊನಾ ಭಯದಿಂದಾಗಿ ರಾಸುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಗ್ರಾಮಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ಆಹಾರ ತಿನ್ನದೆ ನರಳಾಡಿ, ಸೂಕ್ತ ಚಿಕಿತ್ಸೆ ಸಿಗದೆ ನರಳಾಡಿ ಸಾಯುತ್ತಿವೆ. ಹೀಗಾಗಿ ರೈತರು ಪಶು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಲಾಕ್ಡೌನ್ ನಡುವೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಪರದಾಡುವಂತಾಗಿದ್ದರೆ. ಇತ್ತ ಕೈಹಿಡಿದಿದ್ದ ಹೈನುಗಾರಿಕೆಯಲ್ಲಿ ಹೊಸದೊಂದು ಬೆಳವಣಿಗೆ ಆಗಿದ್ದು, ರೈತರು ಕುಸಿದಿದ್ದು, ಸಾಕಷ್ಟು ಆತಂಕಕ್ಕೀಡಾಗಿದ್ದಾರೆ.