ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು - ಕೋಲಾರ ಜಿಲ್ಲಾ ಸುದ್ದಿ

ನವಜಾತ ಶಿಶುವೊಂದರ ಅಪಹರಣ ಪ್ರಕರಣದಲ್ಲಿ ಪೊಲೀಸ್​ ವಿಚಾರಣೆ ಎದುರಿಸಿದ್ದರೆನ್ನಲಾದ ಕುಟುಂಬವೊಂದು ಮರ್ಯಾದೆಗೆ ಹೆದರಿ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿತ್ತು. ಇಂದು ಕುಟುಂಬದ ಐವರು ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

death-of-family-who-attempted-suicide-by-poisoning-in-kolar
ಕಟುಂಬ ಚಿಕಿತ್ಸೆ ಫಲಿಸದೆ ಸಾವು

By

Published : Nov 9, 2021, 1:04 PM IST

ಕೋಲಾರ:ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬ ಐವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನವಜಾತ ಶಿಶುವೊಂದರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು ಎನ್ನಲಾಗ್ತಿದೆ. ಸಮಾಜಕ್ಕೆ ಅಂಜಿ ಇಡೀ ಕುಟುಂಬವು ಭಾನುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದ ಕಟುಂಬ ಚಿಕಿತ್ಸೆ ಫಲಿಸದೆ ಸಾವು

ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಸಿದ ವೈದ್ಯರು ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮುನಿಯಪ್ಪ (70) ಪತ್ನಿ ನಾರಾಯಣಮ್ಮ (65), ಅಳಿಯ ಬಾಬು (45) ಮಗಳು ಪುಷ್ಪ (33) ಹಾಗೂ ಮೊಮ್ಮಗಳು ಗಂಗೋತ್ರಿ (17) ರಾತ್ರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ-ವಿಷ ಸೇವಿಸಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಯತ್ನ: ಇಬ್ಬರ ಸ್ಥಿತಿ ಚಿಂತಾಜನಕ

ಕುಟುಂಬದ ಸಾವಿಗೆ ಕಾರಣ:ಮೃತ ಮುನಿಯಪ್ಪ ಅವರ ಪುತ್ರಿ ಪುಷ್ಪಾ ಅವರಿಗೆ ಪ್ರೀತಿಸಿ ಮದುವೆಯಾಗಿದ್ದಂತಹ ಯುವತಿಯೊಬ್ಬರು 20 ದಿನಗಳ ಹೆಣ್ಣು ಮಗುವನ್ನು ಕೊಟ್ಟು ಊರಿಗೆ ಹೋಗಿದ್ದರು. ಊರಿಂದ ಬಂದ ನಂತರ ಪುಷ್ಪಾ ಅವರು ತಮಗೆ ಯಾವುದೇ ಮಗುವನ್ನು ಕೊಟ್ಟಿಲ್ಲ ಎಂದಿದ್ದರು. ಇದರಿಂದ ಅಸಮಾಧಾನಗೊಂಡ ಯುವತಿ ಮಹಿಳಾ ಪೊಲೀಸ್ ಠಾಣೆಗೆ ಪುಷ್ಪಾ ವಿರುದ್ಧ ಮಗು ಅಪಹರಣ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಪುಷ್ಪಾ ಹಾಗೂ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದರು ಎನ್ನಲಾಗ್ತಿದೆ. ಜತೆಗೆ ಮಗುವನ್ನು ತಂದು ಕೊಡುವಂತೆ ತಾಕೀತು ಮಾಡಿದ್ದರು. ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಹೆದರಿದ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಅವರನ್ನು ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಐದು ಮಂದಿಯೂ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್ಪಿ ಡೆಕ್ಕಾ ಕಿಶೋರ್ ಬಾಬು ಅವರು, ಪ್ರೀತಿಸಿ ಮದುವೆಯಾಗಿದ್ದ ಯುವತಿ ತಮ್ಮ ಮನೆಯವರಿಗೆ ತಿಳಿಯಬಾರದೆಂಬ ಉದ್ದೇಶದಿಂದ ಹೆಣ್ಣು ಮಗುವನ್ನು ಪುಷ್ಪಾ ಎಂಬುವರಿಗೆ ಕೊಟ್ಟು ಹೋಗಿದ್ದರು. ಮರಳಿ ಬಂದ ಯುವತಿ ಮಗು ಕೇಳಿದಾಗ ಪುಷ್ಟಾ ತಮ್ಮ ಬಳಿ ಮಗು ಇಲ್ಲ ಎಂದಿದ್ದರು. ಈ ಕುರಿತು ದೂರು ದಾಖಲಾಗಿತ್ತು. ಇದರಿಂದ ಮರ್ಯಾದೆಗೆ ಅಂಜಿದ ಮುನಿಯಪ್ಪ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details