ಕರ್ನಾಟಕ

karnataka

ETV Bharat / state

ತಾಯಿ ಮೃತಪಟ್ಟ ವಿಚಾರ ತಿಳಿದು ರಸ್ತೆಯಲ್ಲೇ ಒದ್ದಾಡಿ ಮೂರ್ಛೆ ತಪ್ಪಿದ ಮಗಳು! - ಕೋಲಾರ ಜಿಲ್ಲೆಯಲ್ಲಿ ಕೊರೊನಾ ಸೋಂಕು

ತಾಯಿಯ ಶವವನ್ನು ಶೌಚಾಲಯದ ಪಕ್ಕದಲ್ಲೇ ಮಲಗಿಸಿದಕ್ಕೆ ಹಿಡಿ ಶಾಪ ಹಾಕಿದ ಮಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಯಾರೂ ನೋಡಿಕೊಳ್ಳೋರಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ..

daughter breaks out in road s her mother dies of corona
daughter breaks out in road s her mother dies of corona

By

Published : Apr 28, 2021, 4:21 PM IST

ಕೋಲಾರ : ತಾಯಿ ಮೃತಪಟ್ಟ ವಿಚಾರ ತಿಳಿದು ಮಗಳು ಆಸ್ಪತ್ರೆ ಎದುರು ರೋಧಿಸಿರುವ ಘಟನೆ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದಿದೆ.

ಬೆಳಗ್ಗೆ ಚೆನ್ನಾಗಿಯೇ ಇದ್ದ ನನ್ನ ತಾಯಿ ಮೃತಪಟ್ಟಿದ್ದಾಳೆ ಎಂದು ಮಗಳು ರಸ್ತೆಯಲ್ಲಿ ಒದ್ದಾಡಿ ಒದ್ದಾಡಿ ಮೂರ್ಛೆ ತಪ್ಪಿದ ಸನ್ನಿವೇಶ ನಡೆದಿದೆ.

ರಸ್ತೆಯಲ್ಲೇ ಒದ್ದಾಡಿ ಮೂರ್ಛೆ ತಪ್ಪಿದ ಮಹಿಳೆ..

ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿಂದು ಈ ಘಟನೆ ನಡೆದಿದ್ದು, 55 ವರ್ಷದ ಕೊರೊನಾ ಸೋಂಕಿತ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಶೌಚಾಲಯಕ್ಕೆ ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಳು.

ತಾಯಿಯ ಶವವನ್ನು ಶೌಚಾಲಯದ ಪಕ್ಕದಲ್ಲೇ ಮಲಗಿಸಿದಕ್ಕೆ ಹಿಡಿ ಶಾಪ ಹಾಕಿದ ಮಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಯಾರೂ ನೋಡಿಕೊಳ್ಳೋರಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕೆಜಿಎಫ್ ತಾಲೂಕಿನ ಮಾರಿಕುಪ್ಪಂ ಮೂಲದ ನಿವಾಸಿಗಳಾಗಿರುವ ಸಂಬಂಧಿಕರಿಂದ ಆಸ್ಪತ್ರೆ ಎದುರು ನರಳಾಟ ನಡೆದಿದ್ದು, ಚಿಕಿತ್ಸೆಗಾಗಿ ರೋಗಿಗಳು ಪರದಾಟ ನಡೆಸಿರುವುದು ಮತ್ತೊಮ್ಮೆ ಸಾಬೀತಾಗಿದೆ. ಇಂದು ಸಹ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸಂಬಂಧಿರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details