ಕರ್ನಾಟಕ

karnataka

ETV Bharat / state

ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ: ಅಳಲು ತೋಡಿಕೊಂಡ ಕೋಲಾರ ರೈತರು - ಕೋಲಾರ ಕಾಡಾನೆ ದಾಳಿ ನ್ಯೂಸ್

ಗಜಪಡೆ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ‌ ಮಾಡಿದೆ. ಎಳೆಸಂದ್ರದ ಗೋವಿಂದಪ್ಪ, ಬೂದಿಕೋಟೆಯ ವೆಂಕಟೇಶಪ್ಪ ಎಂಬುವರ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೋ ಬೆಳೆಗಳನ್ನು ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಮಣ್ಣು ಪಾಲಾಗಿದೆಯೆಂದು ರೈತರು ಅಳಲು ತೋಡಿಕೊಂಡಿದ್ದಾರೆ.

crop loss due to elephant attack in kolar
ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ...ಅಳಲು ತೋಡಿಕೊಂಡ ಕೋಲಾರ ರೈತರು

By

Published : Dec 1, 2020, 1:39 PM IST

ಕೋಲಾರ: ಕೋಲಾರದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಕಳೆದ 15 ದಿನಗಳಿಂದ ಇಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ದಾಳಿ ನಡೆಸಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ!

ಸದ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಬೂದಿಕೋಟೆ, ಎಳೆಸಂದ್ರ ಸುತ್ತ-ಮುತ್ತ ಬೀಡುಬಿಟ್ಟಿರುವ ಗಜಪಡೆ, ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿವೆ. ಎಳೆಸಂದ್ರದ ಗೋವಿಂದಪ್ಪ, ಬೂದಿಕೋಟೆಯ ವೆಂಕಟೇಶಪ್ಪ ಎಂಬುವರ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೋ ಬೆಳೆ ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಮಣ್ಣು ಪಾಲಾಗಿದೆಯೆಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿ:ಕಲಬುರಗಿ: ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಸಹಚರರ ಬಂಧನ

ಇಷ್ಟೆಲ್ಲಾ ಸಮಸ್ಯೆ ಆದ್ರೂ ಕೂಡ ಆನೆ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details