ಕೋಲಾರ: ಜಿಲ್ಲೆಯ ಹಲವೆಡೆ ಸುರಿದಿರುವ ಮಳೆಯಿಂದಾಗಿ ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಜಲಾವೃತಗೊಂಡಿವೆ. ಮಳೆನೀರು ಬೆಳೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಮುಳುಗಡೆಯಾಗಿದೆ.
ತಾಲೂಕಿನ ನರಸಾಪುರ ಹಾಗೂ ವೇಮಗಲ್ ಸುತ್ತಮುತ್ತ ಮಧ್ಯರಾತ್ರಿ ಭಾರಿ ಮಳೆಯಾಗಿದ್ದು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಾಜಕಾಲುವೆ ಹಾಗೂ ಹಳ್ಳಕೊಳ್ಳದ ನೀರು ನೇರವಾಗಿ ರೈತರ ತೋಟಗಳಿಗೆ ನುಗ್ಗಿದ್ದು, ಬೆಳೆ ನಷ್ಟವಾಗಿದೆ.