ಕರ್ನಾಟಕ

karnataka

ETV Bharat / state

ಕೋಲಾರ: ಮೊಬೈಲ್‌ಗೆ ಬಂದ ಲಿಂಕ್ ತೆರೆದು ₹15 ಲಕ್ಷ ಕಳ್ಕೊಂಡ ವ್ಯಕ್ತಿ! - ಈಟಿವಿ ಭಾರತ್​ ಕನ್ನಡ ನ್ಯೂಸ್

ಮೋಸ ಹೋದ ವ್ಯಕ್ತಿ ಕೆಜಿಎಫ್‌ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಜಿಎಫ್‌ನ ಸಿಇಎನ್ ಪೊಲೀಸ್ ಠಾಣೆ
ಕೆಜಿಎಫ್‌ನ ಸಿಇಎನ್ ಪೊಲೀಸ್ ಠಾಣೆ

By

Published : Aug 4, 2023, 5:41 PM IST

ಕೋಲಾರ :ತಿಂಗಳಿಗೆ 50 ಸಾವಿರ ರೂ ಆದಾಯ ಬರುವುದಾಗಿ ಹೇಳಿದ್ದನ್ನು ನಂಬಿದ ವ್ಯಕ್ತಿಯೊಬ್ಬರು ತನ್ನ ಮೊಬೈಲ್‌ಗೆ ಬಂದ ಲಿಂಕು ತೆರೆದು ತಮ್ಮ ಬ್ಯಾಂಕ್ ಖಾತೆಯಿಂದ 15 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಕೋಲಾರದ ಕೆಜಿಎಫ್​ನ ಸುಭಾಷ್ ನಗರದ ಮುರುಗನ್ ಹಣ ಕಳೆದುಕೊಂಡವರು.

ಮೋಸ ಹೋಗಿದ್ದೇಗೆ?: ಮುರುಗನ್​ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಟಿಜೆಸಿ ಕಾರ್ಪೊರೇಟ್ ಕಂಪನಿಯ ರೀಜನಲ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಫೋನ್ ಪೇ ಲಿಂಕ್​ಕಳುಸಿ, ಲಿಂಕ್​ ಓಪನ್ ಮಾಡಿದರೆ ತಿಂಗಳಿಗೆ 50 ಸಾವಿರ ರೂ ಬರುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಮುರುಗನ್ ತನ್ನ ಮೊಬೈಲ್‌ಗೆ ಬಂದಿದ್ದ ಲಿಂಕ್​ ಓಪನ್ ಮಾಡಿದ್ದಾರೆ.

ದುಷ್ಕರ್ಮಿ ಫೋನ್ ಪೇ ಮೂಲಕ ಮುರುಗನ್​ ಬ್ಯಾಂಕ್​ ಖಾತೆಯಿಂದ ಹಂತಹಂತವಾಗಿ ಕಳೆದ ಒಂದು ತಿಂಗಳಿನಿಂದ 15,27,400 ರೂ. ಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಕೆಜಿಎಫ್‌ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಾಲಾ ಶಿಕ್ಷಕಿ ಬಳಿ 1 ಲಕ್ಷ ವಸೂಲಿ; ಆರೋಪಿ ಸೆರೆ : ಟೆಲಿಗ್ರಾಂ ಆ್ಯಪ್​ನ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ ಒಂದು ಲಕ್ಷ ನಗದು ವಸೂಲಿ ಮಾಡಿದ್ದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಎಂದು ಪೊಲೀಸರು ಪತ್ತೆ ಹಚ್ಚಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಶ್ವತ್ ಹೆಬ್ಬಾರ್ ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಅವರಿಗೆ ನಕಲಿ ಟೆಲಿಗ್ರಾಂ ಖಾತೆಯ ಮೂಲಕ 3 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಜ್ಯೋತಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ. ಅವರ ತಂಡ ಆಗಸ್ಟ್​ 2ರ ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯುತ್​ ಬಿಲ್​ ಹೆಸರಲ್ಲಿ ವಂಚನೆ: ಬೆಂಗಳೂರಿನ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್​ ಬಿಲ್​ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ ವಂಚನೆ ಮಾಡಿದ್ದ ಪ್ರಕರಣ ಇತ್ತೀಚೆಗೆ ನಡೆದಿತ್ತು. ವಿಠಲ್​ ಮಲ್ಯ ರಸ್ತೆಯ ನಿವಾಸಿಯೊಬ್ಬರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಬೆಸ್ಕಾಂ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿ ಬಿಲ್​ ಕಳಿಸಿ, ಬಿಲ್​ ಪಾವತಿಸಿ, ಇಲ್ಲವಾದಲ್ಲಿ ವಿದ್ಯುತ್​ ಕಡಿತಗೊಳಿಸುತ್ತೇವೆ ಎಂದು ಲಿಂಕ್​ ಒಂದನ್ನು ಕಳಿಸಿ, 10 ರೂ ಕಳುಹಿಸುವಂತೆ ಹೇಳಿದ್ದನು. ಅದರಂತೆ 10 ರೂ ಕಳುಹಿಸಿದ್ದ ತಕ್ಷಣ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಮಂಗಮಾಯವಾಗಿತ್ತು. ಈ ಬಗ್ಗೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ :ಬೆಳ್ತಂಗಡಿ: ನಕಲಿ ಆ್ಯಪ್​​ ಮೂಲಕ ಶಿಕ್ಷಕಿಗೆ ಹಣ ವಂಚನೆ.. ಆರೋಪಿ ಬಂಧನ

ABOUT THE AUTHOR

...view details