ಕೋಲಾರ:ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಎರಡು ಲಾರಿಗಳಲ್ಲಿರುವ ಗೋವುಗಳನ್ನ ವೇಮಗಲ್ ಪೊಲೀಸರು ರಕ್ಷಿಸಿದ್ದಾರೆ. ಕಳೆದ ರಾತ್ರಿ ಚಾಕಾರಸನಹಳ್ಳಿ ಮಾರ್ಗವಾಗಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ, ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನ ಪರಿಶೀಲಿಸಿದಾಗ ಗೋವುಗಳು ಇರುವುದು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.