ಕೋಲಾರ: ನಾಟಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆವಲಕುಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾರಾಯಣಸ್ವಾಮಿ ಹಾಗೂ ಭಾಗ್ಯಮ್ಮ ಎಂಬ ದಂಪತಿಗೆ ಸೇರಿದ ನಾಟಿ ಹಸು ಇದಾಗಿದೆ. ಇದುವರೆಗೂ ಮೂರು ಬಾರಿ ಕರುಗಳಿಗೆ ಜನ್ಮ ನೀಡಿದ್ದ ಹಸು, ಪ್ರತಿ ಬಾರಿಯೂ ಒಂದೊಂದು ಕರುವಿಗೆ ಜನ್ಮ ನೀಡಿತ್ತು. ಇದೀಗ ಮೂರು ಕರುಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.