ಕೋಲಾರ: ಕಾಡು ಹಂದಿ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್ನ್ನು ಹಸುವೊಂದು ತಿನ್ನಲು ಹೋದ ಪರಿಣಾಮ ಅದರ ಬಾಯಿಗೆ ಗಂಭೀರವಾಗಿ ಗಾಯವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಲ್ಲಿ ನಡೆದಿದೆ.
ಬಂಗಾರಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ ಸುಮಾರು ಒಂದು ಲಕ್ಷ ಮೌಲ್ಯದ ಹಸು ಸಾವನ್ನಪ್ಪಿದೆ. ಕಾಡುಹಂದಿ ಬೇಟೆಗಾಗಿ ಕೇಪ್ ಉಂಡೆ ಇಟ್ಟಿದ್ದು, ಮೇವು ತಿನ್ನಲು ಹೋದಂತಹ ಸಂದರ್ಭದಲ್ಲಿ ಕೇಪ್ ಸಿಡಿದು ಹಸುವಿನ ಬಾಯಿಗೆ ತೀವ್ರ ಗಾಯವಾಗಿದೆ. ಅಲ್ಲದೆ ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಸೀಮೆಹಸುವಿನ ಬಾಯಿ ಛಿದ್ರವಾಗಿದೆ.