ಕೋಲಾರ :ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗುವುದು. ಅಲ್ಲದೆ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ, ಹೋಮ್ ಐಸೋಲೇಷನ್ನಲ್ಲಿರುವಂತಹ ಸೋಂಕಿತರೊಂದಿಗೆ ಪ್ರತಿನಿತ್ಯ ದೂರವಾಣಿಯೊಂದಿಗೆ ಮಾತನಾಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಆಯ್ದ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪಿಎಂ ಕಾನ್ಫರೆನ್ಸ್ನಲ್ಲಿ ಭಾಗಿಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು.
ಕೋವಿಡ್ ಸೆಂಟರ್ಗಳನ್ನ ಹೆಚ್ಚಿಸುವ ಸಲುವಾಗಿ ದಾನಿಗಳಿಗೆ ಸರ್ಕಾರ ಅವಕಾಶವನ್ನ ನೀಡಿದೆ. ಅಲ್ಲದೇ, ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನ ಹೆಚ್ಚಿಸಲಿದ್ದು, ಪ್ರತಿ ದಿನ ಜಿಲ್ಲೆಯಲ್ಲಿ ನಾಲ್ಕು ಸಾವಿರ ಟೆಸ್ಟ್ಗಳನ್ನ ಮಾಡುವ ಚಿಂತನೆ ನಡೆಸುವುದಾಗಿ ಹೇಳಿದರು.
ಕೊರೊನಾ ಹೆಚ್ಚಾಗುತ್ತಿರುವ ಕೋಲಾರ ಸೇರಿದಂತೆ ಮಾಲೂರು, ಕೆಜಿಎಫ್ನಲ್ಲಿ ಕಠಿಣ ರೂಲ್ಸ್ ಜಾರಿ ಮಾಡುವ ಸಲುವಾಗಿ ನಾಳೆ ಸಂಜೆಯೊಳಗೆ ಅಂತಿಮ ರೂಪುರೇಷೆಗಳನ್ನ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲೂ ಸಹ ಬ್ಲಾಕ್ ಫಂಗಸ್ ರೋಗ ಕಂಡು ಬಂದಿದ್ದು, ಮುಂಜಾಗ್ರತೆಯಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ 30 ಬೆಡ್ಗಳುಳ್ಳ ವಾರ್ಡ್ಗಳನ್ನಬ್ಲಾಕ್ ಫಂಗಸ್ ರೋಗಿಗಳಿಗಾಗಿ ಮಾಡಿದ್ದೇವೆ ಎಂದರು.