ಕರ್ನಾಟಕ

karnataka

ETV Bharat / state

ನ್ಯಾಯಾಲಯದಲ್ಲಿ ನಿರ್ಣಯ ಸಿಗುತ್ತೆ, ನ್ಯಾಯ ಸಿಗಲ್ಲ : ವಿಶ್ವೇಶ್ವರ ಹೆಗಡೆ ಕಾಗೇರಿ - ಜೀವನಾನುಭವದಿಂದ ಸಂವಿಧಾನ ಶ್ರೇಷ್ಠವಾಗಿದೆ

ಇಂದು ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲೂ ಭ್ರಷ್ಟತೆ ತುಂಬಿದೆ. ನ್ಯಾಯಾಂಗದಲ್ಲಿ ನಿರ್ಣಯ ಮಾತ್ರ ಸಿಗುತ್ತಿದೆ, ನ್ಯಾಯ ಸಿಗುತ್ತಿಲ್ಲ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು

Etv Bharatcourt-does-not-give-justice-only-give-judgment-said-vishweshwar-hegde-kageri
Etv Bharatವಿಶ್ವೇಶ್ವರ ಹೆಗಡೆ ಕಾಗೇರಿ

By

Published : Oct 12, 2022, 6:45 PM IST

Updated : Oct 12, 2022, 7:43 PM IST

ಕೋಲಾರ : ನ್ಯಾಯಾಂಗ ವ್ಯವಸ್ಥೆ ತನ್ನ ಆದರ್ಶ ಮೌಲ್ಯಗಳಲ್ಲಿ ಕಳೆಗುಂದಿದೆ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತಿಲ್ಲ, ನಿರ್ಣಯ ಸಿಗುತ್ತಿದೆ ಎಂದು ಕೋಲಾರದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯತೆ ಕುರಿತು ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ನ್ಯಾಯ ಸಿಗೋದಕ್ಕೆ ಕಷ್ಟವಾಗುತ್ತಿದೆ. ನ್ಯಾಯಾಲಯದಲ್ಲಿ ಜಡ್ಜ್ ಮೆಂಟ್ ಸಿಗುತ್ತಿದೆ, ಜಸ್ಟೀಸ್ ಸಿಗುತ್ತಿಲ್ಲ. ಇನ್ನು ನ್ಯಾಯಾಂಗ ಇವತ್ತೇನು ಆದರ್ಶದ ತುತ್ತ ತುದಿಯಲ್ಲಿ ಇದೆಯಾ?. ನ್ಯಾಯಾಲಯಗಳಲ್ಲಿ ಭ್ರಷ್ಟತೆ ಹಾಗೂ ವಿಳಂಬತೆ ಇಲ್ವ? ಎಂದು ಪ್ರಶ್ನಿಸಿದರು.

ನ್ಯಾಯಾಲಯದಲ್ಲಿ ನಿರ್ಣಯ ಸಿಗುತ್ತೇ, ನ್ಯಾಯ ಸಿಗಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕೋಲಾರದಲ್ಲಿ ಹೇಳಿದರು.

ಶಾಸಕಾಂಗ ಕ್ಷೇತ್ರ, ರಾಜಕೀಯ ಕ್ಷೇತ್ರ ಸಂವಿಧಾನಬದ್ದವಾಗಿ ಸ್ಥಾಪನೆಯಾಗಿದೆ. ಬಹಳ‌ ಜವಾಬ್ದಾರಿಯುತವಾಗಿದೆ‌. ರಾಜಕೀಯದವರು ಸರಿಯಾದರೆ ಎಲ್ಲರೂ ಸರಿಯಾಗುತ್ತಾರೆ ಎಂದು ಬೆರಳು ಮಾಡುತ್ತೀರಿ. ಅದಕ್ಕಾಗಿ ನಾವು ಸರಿ ಮಾಡಿಕೊಳ್ಳುತ್ತಿದ್ದೇವೆ, ಚರ್ಚೆ ಮಾಡುತ್ತಿದ್ದೇವೆ. ಆದರೆ ನಮ್ಮಲ್ಲಿ ಮಾತ್ರ ಸರಿ ಮಾಡಿಕೊಂಡರೆ ಸಾಕಾಗೋಲ್ಲ ಎಲ್ಲವೂ ಸರಿಯಾಗಬೇಕು ಎಂದರು.

ಅಂಬೇಡ್ಕರ್ ಅವರ ಜೀವನಾನುಭವದಿಂದ ಸಂವಿಧಾನ ಶ್ರೇಷ್ಠವಾಗಿದೆ :ಸಂವಿಧಾನವನ್ನು ಅಂಬೇಡ್ಕರ್ ಅವರು ಬಿಟ್ಟು ಬೇರೆಯವರು ಬರೆದಿದ್ದರೆ, ಅದು ಕೇವಲ ಅಕ್ಷರ ಜೋಡಣೆಯಾಗುತ್ತಿತ್ತು. ಅಂಬೇಡ್ಕರ್ ಅವರು ಶೋಷಣೆಯ ಜೀವಾನುಭವದ ಆಧಾರದ ಮೇಲೆ ಸಂವಿಧಾನ ರಚನೆ ಮಾಡಲು ಕಾರಣೀಕರ್ತರಾಗಿದ್ದಾರೆ. ಅದರಲ್ಲಿ ಜೀವನಾನುಭವ, ಸಮಾಜದ ಸ್ಥಿತಿಗತಿಗಳ ಅವಲೋಕನವಿದೆ, ಭವಿಷ್ಯದಲ್ಲಿ ಎಲ್ಲವನ್ನೂ ಸರಿಮಾಡುತ್ತೇನೆ ಎಂಬುವ ದೂರದೃಷ್ಟಿಕೋನವಿದೆ, ಆ ಕಾರಣದಿಂದ ಅದೊಂದು ಶ್ರೇಷ್ಠ ಸಂವಿಧಾನವಾಗಿ ಇವತ್ತಿಗೂ ಇದೆ ಎಂದು ಕಾಗೇರಿ ಹೇಳಿದರು.

ಇದನ್ನೂ ಓದಿ :ಭೋಪಾಲ್​​ನಲ್ಲಿ ಖರ್ಗೆ.. ಎಲ್ಲ ಪ್ರತಿನಿಧಿಗಳಿಗೆ ಪತ್ರ.. ಹಲವು ಭರವಸೆ..! ಏನಿದೆ ಆ ಪತ್ರದಲ್ಲಿ?

Last Updated : Oct 12, 2022, 7:43 PM IST

ABOUT THE AUTHOR

...view details