ಕರ್ನಾಟಕ

karnataka

ETV Bharat / state

ಐದು ಜನರಿಗೆ ಕೊರೊನಾ ಸೋಂಕು: ಕೋಲಾರ ಡಿಸಿ - ಐದು ಜನರಿಗೆ ಕೊರೊನಾ ಸೋಂಕು ಧೃಡ

ಜಿಲ್ಲೆಯಲ್ಲಿ ಐದು ಜನರಿಗೆ ಕೊರೊನಾ ಸೋಂಕು ಇರುವುದನ್ನ ಜಿಲ್ಲಾಧಿಕಾರಿ ಸತ್ಯಭಾಮ ಖಚಿತಪಡಿಸಿದ್ದಾರೆ.

Coronavirus infection in five people: Kolar DC
ಐದು ಜನರಿಗೆ ಕೊರೊನಾ ಸೋಂಕು ಧೃಡ: ಕೋಲಾರ ಡಿಸಿ

By

Published : May 12, 2020, 11:40 PM IST

ಕೋಲಾರ: ಜಿಲ್ಲೆಯಲ್ಲಿ ಐದು ಜನರಿಗೆ ಕೊರೊನಾ ಸೋಂಕು ಇರುವುದನ್ನ ಜಿಲ್ಲಾಧಿಕಾರಿ ಸತ್ಯಭಾಮ ಖಚಿತಪಡಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು, ಮೂವರು ಯುವಕರು ಸೇರಿದಂತೆ ಐದು ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದು, ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದರು.

ಇನ್ನು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಜನರನ್ನ ಕ್ವಾರಂಟೈನ್​ ಮಾಡಲಾಗಿದ್ದು, ಈ ನಾಲ್ಕು ಸೋಂಕಿತರ ಗ್ರಾಮಗಳನ್ನ ಕಂಟೇನ್ಮೆಂಟ್ ಝೋನ್​​ಗೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು. ಇನ್ನು ಸೋಂಕಿತರನ್ನ ಕೋಲಾರದ ಜಾಲಪ್ಪ ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದರು.

ಇನ್ನು ಪಿ. 906 ಸೋಂಕಿತ ಮೇ 8ರಂದು ಸರ್ಕಾರಿ ಬಸ್​​ನಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮೂಲಕ‌ ಕೋಲಾರ‌ ಜಿಲ್ಲೆಗೆ ಆಗಮಿಸಿರುವುದಾಗಿ ಹೇಳಿದ್ರು. ಅಲ್ಲದೆ ಪಿ. 907 ಸೋಂಕಿತ ಲಾಕ್​ಡೌನ್ ಸಡಿಲಿಕೆಯಾದ ನಂತರ ಮೇ 7ರಂದು ಬಸ್​​ನಲ್ಲಿ ಬೆಂಗಳೂರಿನಿಂದ ಬಂದಿರುವುದಾಗಿ ತಿಳಿಸಿದರು.

ABOUT THE AUTHOR

...view details