ಕೋಲಾರ: ಜಿಲ್ಲೆಯಲ್ಲಿ 18 ಜನರಿಗೆ ಕೊರೊನಾ ಸೋಂಕು ಕಂದುಬಂದಿದ್ದು, ಯಾರೊಬ್ಬರಲ್ಲಿಯೂ ಕೊರೊನಾ ವೈರಸ್ ಗುಣಲಕ್ಷಣಗಳು ಕಂಡುಬರುತ್ತಿಲ್ಲ. ಇದರಿಂದ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ರೋಗಿ ಸಂಖ್ಯೆ ಪಿ- 907, ಪಿ- 1,812 ಹಾಗೂ ಪಿ- 2,147ರಲ್ಲಿ ಕೊರೊನಾ ಸೋಂಕಿನ ಯಾವುದೇ ಗುಣ ಲಕ್ಷಣಗಳು ಕಂಡು ಬಾರದಿರುವುದು ಆತಂಕವಾಗಿದೆ. ಎಪಿಎಂಸಿ ಮಾರುಕಟ್ಟೆಯಿಂದ ಹೂ, ಹಣ್ಣು, ತರಕಾರಿಗಳನ್ನು ತೆಗೆದುಕೊಂಡು ಅಂತಾರಾಜ್ಯಕ್ಕೆ ತೆರಳುವ ಚಾಲಕರಲ್ಲಿಯೇ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಮೊದಲು ಕೋವಿಡ್ ಪತ್ತೆಯಾಗಿದ್ದು ಡ್ರೈವರ್ಗೆ.
ಆರೋಗ್ಯ ಅಧಿಕಾರಿ ವಿಜಯ್ ಕುಮಾರ್ 18 ಜನ ಸೋಂಕಿತರ ಪೈಕಿ 9 ಜನ ವಾಹನ ಚಾಲಕರು ಹಾಗೂ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬಸ್ಥರು ಮತ್ತು ಸ್ನೇಹಿತರಲ್ಲೇ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಗೆ ತಲೆನೋವಾಗಿ ಆರಿರವುದು ಸೋಂಕಿತರಲ್ಲಿ ರೋಗ ಲಕ್ಷಣ ಇಲ್ಲ. ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲೂ ರೋಗ ಲಕ್ಷಣಗಳ ಪತ್ತೆ ಹಚ್ಚುವುದು ಸಿಬ್ಬಂದಿಗೆ ಹರಸಾಹಸವಾಗಿದೆ.
ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ಏರಿಯಾಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ರ್ಯಾಂಡಮ್ ಟೆಸ್ಟ್ಗಳನ್ನು ಮಾಡುವ ಮೂಲಕ ಸೋಂಕಿತರನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ.