ಕೋಲಾರ : ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಅತಂಕಕ್ಕೆ ಒಳಗಾಗಿದ್ದಾರೆ.
ಕೋಲಾರದಲ್ಲಿ ಹೆಚ್ಚಾಗಲಿದೆಯಾ ಕೊರೊನಾ ಪೀಡಿತರ ಸಂಖ್ಯೆ - ಕೋಲಾರದಲ್ಲಿ ಕೊರೊನಾ
ಜಿಲ್ಲೆಯ ಮೂವರಲ್ಲಿ ಕೊರೊನಾ ಲಕ್ಷಣ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ಕೊಲಾರ ಜನರಲ್ಲಿ ಆತಂಕ ಮನೆಮಾಡಿದೆ.
ಶಿಡ್ಲಘಟ್ಟ ತಾಲೂಕು ಮರಳೂರು ಮೂಲದ 27 ವರ್ಷದ ವ್ಯಕ್ತಿ ಮಾಲೂರಿನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಈತ ಮಾಲೂರಿನಿಂದ ಚೆನ್ನೈಗೆ ಹೋಗಿ ಬಂದಿದ್ದಾನೆ. ಇನ್ನು ಮಾಲೂರಿನಲ್ಲಿ ಸ್ನೇಹಿತನ ಮನೆಯಲ್ಲಿ ವಾಸವಿದ್ದ ಇವನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಕೋಲಾರದ ಐಸೋಲೇಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು 45 ವರ್ಷದ ತರಕಾರಿ ವ್ಯಾಪಾರಿಯಲ್ಲಿ ಕೊರೊನಾ ರೋಗ ಲಕ್ಷಣಗಳು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸೊಣ್ಣವಾಡಿ ಗ್ರಾಮವನ್ನ ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದು, ಕೋಲಾರದ ಕೆಜಿಎಫ್ನಲ್ಲಿ ಮತ್ತೊಂದು ಕೊರೊನಾ ಶಂಕಿತ ವ್ಯಕ್ತಿ ಕಂಡು ಬಂದಿದ್ದಾನೆ ಎಂದು ಮಾಹಿತಿ ತಿಳಿದುಬಂದಿದೆ.