ಕೋಲಾರ :ಆಂಧ್ರದ ವಿಕೋಟೆಯಿಂದ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ್ದ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದ ಜಿಲ್ಲೆಯ 24 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕೋಲಾರದಲ್ಲಿ ಕೊರೊನಾ ಭಯ ಹೆಚ್ಚಿಸಿದ ವಿಕೋಟೆ ಪಾಸಿಟಿವ್ ಪ್ರಕರಣ ಟ್ರಾವೆಲ್ ಹಿಸ್ಟರಿ!! - kolar APMC market news
ವಿಕೋಟೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 5 ಮಂದಿಯ ಟ್ರಾವೆಲ್ ಹಿಸ್ಟರಿ ಬೆನ್ನತ್ತಿ ಹೊರಟ ಜಿಲ್ಲಾಢಳಿತಕ್ಕೆ, ತರಕಾರಿ ವರ್ತಕನೋರ್ವ ಎಪಿಎಂಸಿಗೆ ಬಂದು ತರಕಾರಿ ಖರೀದಿಸಿ ಚೆನೈಗೆ ಪ್ರಯಾಣ ಬೆಳೆಸಿರುವುದಾಗಿ ತಿಳಿದು ಬಂದಿದೆ. ಇದರಿಂದ ಎಚ್ಚೆತ್ತ ಜಿಲ್ಲಾಢಳಿತ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಮಂದಿಯನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ.
ವಿಕೋಟೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 5 ಮಂದಿಯ ಟ್ರಾವೆಲ್ ಹಿಸ್ಟರಿ ಬೆನ್ನತ್ತಿ ಹೊರಟ ಜಿಲ್ಲಾಡಳಿತಕ್ಕೆ, ತರಕಾರಿ ವರ್ತಕನೋರ್ವ ಎಪಿಎಂಸಿಗೆ ಬಂದು ತರಕಾರಿ ಖರೀದಿಸಿ ಚೆನ್ನೈಗೆ ಪ್ರಯಾಣ ಬೆಳೆಸಿರುವುದಾಗಿ ತಿಳಿದು ಬಂದಿದೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ವರ್ತಕನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಮಂದಿಯನ್ನು ಹೋಮ್ ಕ್ವಾರೆಂಟೈನ್ಗೆ ಒಳಪಡಿಸಿದೆ. ಇದರ ಜೊತೆಗೆ ಇನ್ನೋರ್ವ ವ್ಯಕ್ತಿ ಕೂಡ ಕೆಜಿಎಫ್ನ ಬೇತಮಂಗಲ ಹಾಗೂ ಸುಂದರಪಾಳ್ಯದಲ್ಲಿ ಓಡಾಟ ನಡೆಸಿರುವುದಾಗಿ ಮಾಹಿತಿ ದೊರೆತಿದೆ.
ಇದೀಗ 24 ಮಂದಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ ಮೂಲಕ ಜಿಲ್ಲೆಗೆ ಕೊರೊನಾ ಭಯ ಹೆಚ್ಚಾಗಿದ್ದು ಜಿಲ್ಲೆಯಾದ್ಯಂತ ಜನರು ಆತಂಕಕ್ಕೊಳಗಾಗಿದ್ದಾರೆ.