ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಗರ್ಭಿಣಿಯರಿಗೆ ಸೋಂಕು: ಬಾಣಂತಿ ತಾಯಂದಿರಿಗೂ ಇಲ್ಲ ಶಿಶುಗಳ ಅಪ್ಪುಗೆ ಭಾಗ್ಯ! - ಬಾಣಂತಿಯರಿಗೆ ಕೊರೊನಾ

ಆ ಕ್ರೂರಿ-ಮಹಾಮಾರಿ ಕೊರೊನಾ ಅನ್ನೋ ವೈರಸ್​ ವಿಶ್ವದಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಹಿಳೆಯರು -ಮಕ್ಕಳು, ವೃದ್ಧರನ್ನು ಬಿಟ್ಟು ಬಿಡದಂತೆ ಹಿಂಸಿಸಿದೆ. ಇನ್ನು ಗರ್ಭಿಣಿಯರಲ್ಲಿ ಈ ಸೋಂಕು ವಕ್ಕರಿಸಿ ಆತಂಕ ಸೃಷ್ಟಿಸಿದೆ. ಇದೀಗ ಬಾಣಂತಿಯರ ಬೆನ್ನೇರಿದ್ದು, ಈ ಮೂಲಕ ಹುಟ್ಟುತ್ತಲೇ ಅಮ್ಮನ ಮಡಿಲಲ್ಲಿ ಮಲಗಿ ನಲಿದಾಡಬೇಕಿದ್ದ ಹಸುಗೂಸುಗಳ ನೆಮ್ಮದಿಯನ್ನು ಸಹ ಕಸಿದುಕೊಂಡಿದೆ.

corona Infection in three pregnant women in kolara
ಕೋಲಾರದ ಮೂವರು ಗರ್ಭೀಣಿಯರಲ್ಲಿ ಸೋಂಕು ಪತ್ತೆ

By

Published : Jul 9, 2020, 2:08 PM IST

ಕೋಲಾರ: ದೇಶಾದ್ಯಂತ ಮಹಾಮಾರಿ ಕೊರೊನಾ ತನ್ನ ವಿಭಿನ್ನ ರೀತಿಯಲ್ಲಿ ಆರ್ಭಟಿಸುತ್ತಿದೆ. ಇದರ ಅಟ್ಟಹಾಸಕ್ಕೆ ಎಲ್ಲ ವಯೋಮಾನದವರು ಸಿಲುಕಿ ನರಳುತ್ತಿದ್ದರೆ, ಕೆಲವರ ಪ್ರಾಣಪಕ್ಷಿ ಹಾರಿಹೋಗಿದೆ.

ಈಗ ಈ ಮಹಾಮಾರಿ ತನ್ನ ಪ್ರಭಾವವನ್ನು ಬೇರೆಡೆ ಸ್ಥಳಾಂತರಿಸಿದ್ದು, ಆಗ ತಾನೇ ಹೊಸ ಪ್ರಪಂಚಕ್ಕೆ ಕಾಲಿಡುತ್ತಾ ಅಮ್ಮನ ಮಡಿಲಲ್ಲಿ ಬೆಚ್ಚನೆ ಮಲಗಿ ಆಡುತ್ತಾ, ನಲಿಯುತ್ತಾ ಎದೆಹಾಲು ಕುಡಿಯಬೇಕಿದ್ದ ನವಜಾತ ಶಿಶುಗಳು ಇಂದು ತಾಯಂದಿರಿಂದ ದೂರವಾಗಿವೆ. ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ ಜಿಲ್ಲಾಸ್ಪತ್ರೆ.

ಹೌದು, ಈ ಕ್ರೂರಿ ಕೊರೊನಾ ಅನ್ನೋ ವೈರಸ್​ ವಿಶ್ವದಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಹಿಳೆಯರು-ಮಕ್ಕಳು, ವೃದ್ಧರನ್ನು ಬಿಟ್ಟು ಬಿಡದಂತೆ ಹಿಂಸಿಸಿದೆ. ಇನ್ನು ಗರ್ಭಿಣಿಯರಲ್ಲಿ ಈ ಸೋಂಕು ವಕ್ಕರಿಸಿ ಆತಂಕ ಸೃಷ್ಟಿಸಿದ್ದಲ್ಲದೇ, ಇದೀಗ ಬಾಣಂತಿಯರ ಬೆನ್ನೇರಿದೆ. ಈ ಮೂಲಕ ಹುಟ್ಟುತ್ತಲೇ ಅಮ್ಮನ ಮಡಿಲಲ್ಲಿ ಮಲಗಿ ನಲಿದಾಡಬೇಕಿದ್ದ ಹಸುಗೂಸುಗಳ ನೆಮ್ಮದಿಯನ್ನು ಕಸಿದುಕೊಂಡಿದೆ.

ಕೋಲಾರದ ಮೂವರು ಗರ್ಭಿಣಿಯರಲ್ಲಿ ಸೋಂಕು ಪತ್ತೆ

ಮೂವರು ಬಾಣಂತಿಯರಲ್ಲಿ ಪಾಸಿಟಿವ್​: ಇಂಥಹ ಪ್ರಕರಣಗಳು ನಡೆದಿರೋದು ಕೋಲಾರದಲ್ಲಿ. ಜಿಲ್ಲೆಯಲ್ಲಿ ಮೂವರು ಬಾಣಂತಿಯರಲ್ಲಿ ಕೊರೊನಾ ಪಾಸಿಟಿವ್​​​ ಬಂದಿರುವ ಹಿನ್ನೆಲೆ ಬಾಣಂತಿಯರು ಹಾಗೂ ಆ ನವಜಾತ ಶಿಶುಗಳನ್ನು ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಲಾಗುತ್ತಿದೆ. ಮೂವರು ಬಾಣಂತಿ ಮಹಿಳೆಯರನ್ನು ಪ್ರತ್ಯೇಕವಾಗಿಟ್ಟು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಶಿಶುಗಳನ್ನು ಪ್ರತ್ಯೇಕವಾಗಿಟ್ಟು ಆರೈಕೆ: ಮಕ್ಕಳಿಗೆ ತಾಯಿ ಎದೆಹಾಲು ಕುಡಿಸುವಾಗ ಮಾತ್ರ ತಾಯಿಯ ಜೊತೆಗೆ ಮಕ್ಕಳನ್ನು ಇರಿಸಲಾಗುತ್ತಿದೆ. ಉಳಿದ ಸಮಯದಲ್ಲಿ ಶಿಶುಗಳನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡಲಾಗುತ್ತಿದೆ. ನಗರದಲ್ಲಿ ಒಂದು ಪ್ರಕರಣ, ಕೆಜಿಎಫ್​ ನಲ್ಲಿ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಒಂದು ಸೇರಿ ಒಟ್ಟು ಜಿಲ್ಲೆಯ ಮೂವರು ಬಾಣಂತಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದ್ದು ಅವರನ್ನು ನಗರದ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಬಾಲಸುಂದರ್ ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಮುನ್ನೆಚ್ಚರಿಕೆಯೊಂದಿಗೆ ಚಿಕಿತ್ಸೆ: ಇನ್ನು ಇಂತಹ ಪ್ರಕರಣಗಳು ಸಾಕಷ್ಟು ಆತಂಕ ಉಂಟು ಮಾಡುವ ಜೊತೆಗೆ ಬಹಳಷ್ಟು ಜವಾಬ್ದಾರಿ ಹಾಗೂ ಕಾಳಜಿ ವಹಿಸಬೇಕಿದ್ದು, ಅದಕ್ಕಾಗಿ ಬಾಣಂತಿಯರು ಹಾಗೂ ಸೋಂಕಿತರಿರುವ ಕೋವಿಡ್​ ಆಸ್ಪತ್ರೆ ಬಳಿ ಸ್ಯಾನಿಟೈಸ್​​​ ಮಾಡುತ್ತಾ, ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ ಅನ್ನೋದು ಜಿಲ್ಲಾ ಆರೋಗ್ಯಾಧಿಕಾರಿಗಳ ಮಾತು.

ಒಟ್ಟಾರೆ ಕೊರೊನಾ ಮಹಾಮಾರಿ ಕೋಲಾರದಲ್ಲಿ ಅಟ್ಟಹಾಸ ಮೆರೆಯುತ್ತಿರುವುದರಿಂದ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಕೊರೊನಾ ಮಹಾಮಾರಿ ತನ್ನ ರೌದ್ರರೂಪವನ್ನು ಪ್ರದರ್ಶಿಸುತ್ತಿದೆ. ಇದು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ABOUT THE AUTHOR

...view details