ಕರ್ನಾಟಕ

karnataka

ETV Bharat / state

ಜೆಡಿಎಸ್​ ಮುಖಂಡ ಆಯೋಜಿಸಿದ್ದ ಬೀಗರೂಟಕ್ಕೂ ಬ್ರೇಕ್‌ ಹಾಕಿದ ಕೊರೊನಾ ಭೀತಿ.. - ಕೋಲಾರದಲ್ಲಿ ಕೊರೊನಾ ಭೀತಿ

ಕಳೆದೊಂದು ವಾರದಿಂದ ಊಟಕ್ಕಾಗಿ‌ ಮೂರು ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಕೊರೊನಾ ವೈರಸ್ ಭೀತಿಯಿಂದ ಎಲ್ಲವೂ ರದ್ದಾಗಿದೆ.

ಕೊರೊನಾ ಭೀತಿ: ಬೀಗರೂಟ ಕಾರ್ಯಕ್ರಮವನ್ನು ರದ್ದು
Corona effect: JDS MLA son program cancel at Kolara

By

Published : Mar 14, 2020, 5:54 PM IST

ಕೋಲಾರ:ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಿದೆ. ಜಿಲ್ಲೆಯಲ್ಲಿ ಸಭೆ, ಸಮಾರಂಭ ಆಯೋಜನೆ ಮಾಡದಂತೆ ಜಿಲ್ಲಾಡಳಿತ ಆದೇಶ ಹೊಡಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಮುಖಂಡರೊಬ್ಬರು ಆಯೋಜಿಸಿದ್ದ ಬೀಗರೂಟ ಕಾರ್ಯಕ್ರಮವನ್ನೇ ರದ್ದು ಮಾಡಲಾಗಿದೆ.

ತಾಲೂಕಿನ ಅರಾಬಿಕೊತ್ತನೂರು ಗ್ರಾಮದ ಬಳಿ ಜೆಡಿಎಸ್ ಮುಖಂಡ ನಂಜುಂಡಗೌಡ ತಮ್ಮ ಪುತ್ರ ಚೇತನ್​ ವಿವಾಹದ ಪ್ರಯುಕ್ತ ಬಾಡೂಟ ಕಾರ್ಯಕ್ರಮ ಆಯೋಜಿಸಿದ್ದರು. ಸುಮಾರು 30 ಕುರಿ, 50 ಕ್ವಿಂಟಾಲ್ ಕೋಳಿಯ ಬಾಡೂ ಕೂಡ ಬೀಗರೂಟಕ್ಕೆ ಸಿದ್ಧಪಡಿಸಲಾಗಿತ್ತು. 25 ಲಕ್ಷ ರೂಪಾಯಿ ಪೆಂಡಾಲ್ ಹಾಕಿ ಬಾಡೂಟ ಕಾರ್ಯಕ್ರಮ‌ ಆಯೋಜಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಭೀತಿಯಿಂದ ಒಂದು ವಾರಗಳ ಕಾಲ ಯಾವುದೇ ಸಭೆ,ಸಮಾರಂಭಗಳನ್ನು ಆಯೋಜಿಸದಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಆದೇಶಿಸಿಸಿದ್ದಾರೆ. ಇದರಿಂದಾಗಿ ಆಯೋಜಕರು ಕಂಗಾಲಾಗಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಗರೂಟ ರದ್ದು..

ಕಳೆದೊಂದು ವಾರದಿಂದ ಊಟಕ್ಕಾಗಿ‌ ಮೂರು ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಕೊರೊನಾ ವೈರಸ್ ಭೀತಿಯಿಂದ ಎಲ್ಲಾ ಸಹ ರದ್ದಾಗಿದೆ. ಮುಂದಿನ ಒಂದು ವಾರ ಕಾಲ ಯಾವುದೇ ಸಭೆ- ಸಮಾರಂಭ, ಜಾತ್ರೆ, ಉತ್ಸವ, ಮದುವೆ, ಸಂತೆ ಮಾಡದಂತೆ ಜಿಲ್ಲಾಡಳಿತ ಆದೇಶಿಸಿದೆ.

ABOUT THE AUTHOR

...view details