ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಲೋಕಸಭಾ ಅಭ್ಯರ್ಥಿ ಪರ ಕೈ ನಾಯಕರ ಭರ್ಜರಿ ಪ್ರಚಾರ - undefined

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​  ಸೇರಿದಂತೆ ಇತರೆ ನಾಯಕರು ಕೋಲಾರ ಲೋಕಸಭಾ ಕಾಂಗ್ರೆಸ್​ ಅಭ್ಯರ್ಥಿ ಕೆ.ಹೆಚ್.​ ಮುನಿಯಪ್ಪ ಪರ ಪ್ರಚಾರ ಮಾಡಿದರು. ಕಾಂಗ್ರೆಸ್​ ಶಾಸಕ ಕೆ.ವೈ. ನಂಜೇಗೌಡ, ಜೆಡಿಎಸ್​ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಭರ್ಜರಿ ರೋಡ್​ ಶೋ ನಡೆಸಿದ್ರು.

ಕೈ ನಾಯಕರ ಭರ್ಜರಿ ಪ್ರಚಾರ

By

Published : Apr 4, 2019, 3:18 AM IST

ಕೋಲಾರ:ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಇತರೆ ನಾಯಕರು ಕೈ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು.

ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್,​ ಕಾಂಗ್ರೆಸ್​ ಅಭ್ಯರ್ಥಿ ಕೆ.ಹೆಚ್.​ ಮುನಿಯಪ್ಪ ಪರ ಪ್ರಚಾರ ಮಾಡಿದರು. ಕಾಂಗ್ರೆಸ್​ ಶಾಸಕ ಕೆ.ವೈ. ನಂಜೇಗೌಡ, ಜೆಡಿಎಸ್​ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಜೊತೆಗೆ ಭರ್ಜರಿ ರೋಡ್​ ಶೋ ನಡೆಸಿದ್ರು. ನಂತರ ಮಾಲೂರಿನ ಮಾರಿಕಾಂಭ ವೃತ್ತದಲ್ಲಿ ಕಾರ್ನರ್​ ಮೀಟಿಂಗ್​ ಮಾಡಿದ ನಾಯಕರು, ಮೋದಿ ಸರ್ಕಾರದ ವಿರುದ್ಧ ಮಾತಿನ ದಾಳಿ ಮಾಡಿದ್ರು.

ಕೈ ನಾಯಕರ ಭರ್ಜರಿ ಪ್ರಚಾರ

ಮೋದಿ ಒಬ್ಬ ಸರ್ವಾಧಿಕಾರಿ. ಮೋದಿ ವಿರುದ್ಧ ಮಾತನಾಡಿದವರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಅವರ ಪಕ್ಷದ ಕೆಲವು ಹಿರಿಯರಾದ ಎಲ್​.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್​ ಸೇರಿದಂತೆ ಹಲವರನ್ನು ಮೂಲೆ ಗುಂಪು ಮಾಡಿದ್ದಾರೆ. ಬಿಜೆಪಿಯವರು ಮಾತ್ರ ಹಿಂದೂಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಇನ್ನು ದೇಶದ ಅಭಿವೃದ್ದಿಗೋಸ್ಕರ ರಾಜ್ಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಂದಾಗಿದೆ. ಹಾಗಾಗಿ ಪರಸ್ಪರ ಎರಡೂ ಪಕ್ಷಗಳು ಚುನಾವಣೆಯಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಯಾರಾದ್ರು ತಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಮಾಡಿದ್ರೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ರು.

ಕೋಲಾರಕ್ಕೆ ಕೆಸಿ ವ್ಯಾಲಿ ಯೋಜನೆಯನ್ನು ರೂಪಿಸಿದವರು ಕೆ.ಹೆಚ್.ಮುನಿಯಪ್ಪನವರು. ಆದ್ರೆ ಕೆ.ಹೆಚ್​ .ಮುನಿಯಪ್ಪನವರೇ ಯೋಜನೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅತೀ ಮುತುವರ್ಜಿಯಿಂದ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದವರು ಮುನಿಯಪ್ಪ, ಅದರಂತೆ ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ​ ವ್ಯಾಲಿ ಯೋಜನೆಗೆ ಶ್ರಮ ಹಾಕಿದ್ದೇನೆ. ಇದು ಸತ್ಯ ಎನ್ನುವ ಮೂಲಕ ಕೆಸಿ ವ್ಯಾಲಿ ಯೋಜನೆಯ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ರು.

For All Latest Updates

TAGGED:

ABOUT THE AUTHOR

...view details