ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನ ಹೈಕಮಾಂಡ್ ಇದೀಗ ಲೋ ಕಮಾಂಡ್.. ಎಂಟಿಬಿ ನಾಗರಾಜ್ ವ್ಯಂಗ್ಯ - ಕೋಲಾರದಲ್ಲಿ ಮಾಜಿ ಶಾಸಕ ಎಂಟಿಬಿ ನಾಗರಾಜ್

ಕಾಂಗ್ರೆಸ್ ಹೈಕಮಾಂಡ್​ಗೆ ಶಕ್ತಿ ಇಲ್ಲದಂತಾಗಿದೆ ಎಂದು ಕೋಲಾರದಲ್ಲಿ ಮಾಜಿ ಶಾಸಕ ಎಂಟಿಬಿ ನಾಗರಾಜ್ ಹೇಳಿದರು.

Congress high command has become low command now: MTB Nagaraj
ಕಾಂಗ್ರೆಸ್​ನ ಹೈಕಮಾಂಡ್ ಇದೀಗ ಲೋ ಕಮಾಂಡ್ ಆಗಿದೆ: ಎಂಟಿಬಿ ನಾಗರಾಜ್

By

Published : Jan 19, 2020, 7:51 PM IST

ಕೋಲಾರ:ಕಾಂಗ್ರೆಸ್ ಹೈಕಮಾಂಡ್​ಗೆ ಶಕ್ತಿ ಇಲ್ಲದಂತಾಗಿದೆ ಎಂದು ಕೋಲಾರದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ವ್ಯಂಗ್ಯವಾಡಿದರು.

ಕಾಂಗ್ರೆಸ್​ನ ಹೈಕಮಾಂಡ್ ಇದೀಗ ಲೋ ಕಮಾಂಡ್ .. ಮಾಜಿ ಸಚಿವ ಎಂಟಿಬಿ ನಾಗರಾಜ್ ವ್ಯಂಗ್ಯ

ಇಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಿಜೆಪಿ ಮುಖಂಡ ಹೂಡಿ ವಿಜಯ್‌ಕುಮಾರ್ ಅವರ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಕಚೇರಿಯನ್ನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದಅವರು,ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಎಂ ಬಿ ಪಾಟೀಲ್ ಎಂಬ ಮೂರು ಬಣಗಳು ಶುರುವಾಗಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ತರುವಂತಾಗಿದೆ ಎಂದರು.

ಹೈಕಮಾಂಡ್ ನಿಖರ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನ ಬಗೆಹರಿಸಬೇಕಿತ್ತು. ಆದರೆ, ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೇ ನಾಯಕರ ಒಳ ಜಗಳಕ್ಕೆ ಕಾರಣವಾಗಿದೆ. ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ಬಿಜೆಪಿಯ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿದ್ದು. ನಾನು ಅವರ ನಿರ್ಧಾರಕ್ಕೆ ಬಧ್ಧನಾಗಿರುತ್ತೇನೆ ಎಂದರು.

ABOUT THE AUTHOR

...view details