ಕೋಲಾರ: ಆರ್ಯವೈಶ್ಯ ಸಮುದಾಯದ ಮಹಾಸಂಗಮಕ್ಕೆ ಇಂದು ಕೋಲಾರ ಸಾಕ್ಷಿಯಾಗಿತ್ತು. ಎರಡು ದಿನಗಳ ಕಾಲ ನಡೆದ ಪ್ರತಿಭೋತ್ಸವ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆರ್ಯವೈಶ್ಯ ಸಮುದಾಯದ ಸಾವಿರಾರು ಜನರ ಮಹಾಸಂಗಮದಲ್ಲಿ ಪಾಲ್ಗೊಂಡಿದರು.
ಆರ್ಯವೈಶ್ಯ ಸಮಾಜದ ರಾಜ್ಯಮಟ್ಟದ ಪ್ರತಿಭೋತ್ಸವ, ಕಲ್ಯಾಣೋತ್ಸವಕ್ಕೆ ತೆರೆ! - kolar latest news
ಕೋಲಾರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ಮೂಡಿಸಿದ್ದ ಆರ್ಯವೈಶ್ಯ ಸಮಾಜದ ರಾಜ್ಯಮಟ್ಟದ ಪ್ರತಿಭೋತ್ಸವ ಹಾಗೂ ಕಲ್ಯಾಣೋತ್ಸವಕ್ಕೆ ತೆರೆ ಬಿದ್ದಿದೆ.
ಆರ್ಯವೈಶ್ಯ ಸಮಾಜದ ರಾಜ್ಯಮಟ್ಟದ ಪ್ರತಿಭೋತ್ಸವ
ಬೆಳ್ಳಿ ಪಲ್ಲಕ್ಕಿಯ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಬರುತ್ತಿರುವುದು, ಇನ್ನೊಂದು ಕಡೆ ಆನೆ, ಕುದುರೆಗಳನ್ನೇರಿದ ಕಲಾವಿದರು. ಇವುಗಳ ಜೊತೆಯಲ್ಲಿಯೇ ಮೆರಗು ಹೆಚ್ಚಿಸುತ್ತಿರುವ ಜಾನಪದ ಕಲಾತಂಡಗಳು ನಗರದ ಜೂನಿಯರ್ ಕಾಲೇಜು ಮೈದಾನದ ಕಡೆ ಹೆಜ್ಜೆ ಹಾಕುತ್ತಿದ್ದವು.
ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ರಾಜಕೀಯ ಗಣ್ಯರು ನೆರೆದಿದ್ದರು.