ಕರ್ನಾಟಕ

karnataka

ETV Bharat / state

ಡಿವೈಎಸ್‌ಪಿ v/s ಶಾಸಕ.. ಬಂಗಾರಪೇಟೆಯಲ್ಲಿ ಹೀಗೊಂದು ಶೀತಲ ಸಮರ - ಶಾಸಕ ನಾರಾಯಣಸ್ವಾಮಿ

ಆತ ನಿವೃತ್ತಿ ಅಂಚಿನಲ್ಲಿರೋ ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್‌ಪಿ. ಕರ್ತವ್ಯಕ್ಕೆ ರಜೆ ಹಾಕಿ ಸಮುದಾಯದ ಜಯಂತಿಯ ಉಸ್ತುವಾರಿ ವಹಿಸಿಕೊಂಡಿದ್ದ ಅವರಿಗೆ ತನ್ನದೇ ಇಲಾಖೆಯ ಪೊಲೀಸರು ಕೇಸ್‌ ದಾಖಲಿಸಿ ಶಾಕ್‌ ಕೊಟ್ಟಿದ್ದಾರೆ. ಸದ್ಯ ಡಿವೈಎಸ್‌ಪಿ ಬೆನ್ನಿಗೆ ಒಕ್ಕಲಿಗ ಸಮುದಾಯ ನಿಂತಿದೆ. ಇವೆಲ್ಲದರ ವಿರುದ್ಧ ಬಂಗಾರಪೇಟೆ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ಕೈವಾಡವಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಬಂಗಾರಪೇಟೆಯಲ್ಲಿ ಹೀಗೊಂದು ಶೀತಲ ಸಮರ

By

Published : Aug 17, 2019, 10:27 PM IST

ಕೋಲಾರ:ಬಂಗಾರಪೇಟೆಯ ಒಕ್ಕಲಿಗ ಭವನದಲ್ಲಿ ಸಮುದಾಯದ ಮುಖಂಡರು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪ್ರತಿಭಟನೆಗೆ ಕಾರಣವೇನು?

ಅಗಸ್ಟ್‌ 5 ರಂದು ಬಂಗಾರಪೇಟೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವೇಳೆ ಅನುಮತಿ ಪಡೆಯದೆ ಧ್ವನಿವರ್ಧಕ ಬಳಕೆ, ಮೆರವಣಿಗೆ ಮಾರ್ಗಸೂಚಿ ಬದಲಾವಣೆ ಹಾಗೂ ಅನುಮತಿ ಪಡೆಯದೆ ಕುದುರೆ ಬಳಸಿರುವ ಆರೋಪದಡಿ ಅಗಸ್ಟ್‌ 7 ರಂದು ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್‌ಪಿ ಆಗಿರೋ ಶಿವಕುಮಾರ್‌ ಸೇರಿದಂತೆ ಏಳು ಜನರ ವಿರುದ್ಧ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿತ್ತು. ಇದರ ವಿರುದ್ಧ ತಿರುಗಿ ಬಿದ್ದಿದ್ದ ತಾಲೂಕಿನ ಒಕ್ಕಲಿಗ ಸಮುದಾಯ, ಇಂದು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ನಾವು ಕೇಸ್‌ ವಾಪಸ್​ ಪಡೆಯುತ್ತೇವೆ ಎಂದು ಪ್ರತಿಭಟನಾಕಾರರ ಮನವೊಲಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಇದೇ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಇದರ ವಿರುದ್ಧ ಬಂಗಾರಪೇಟೆ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ಕೈವಾಡವಿದೆ ಎಂದು ಆರೋಪಿಸಿದ್ರು.

ಡಿವೈಎಸ್‌ಪಿ v/s ಶಾಸಕ..

ಅಗಸ್ಟ್​-5 ರಂದು ನಡೆದ ಕೆಂಪೇಗೌಡ ಜಯಂತಿಯ ಉಸ್ತುವಾರಿಯನ್ನು ಡಿವೈಎಸ್‌ಪಿ ಶಿವಕುಮಾರ್‌ ಅವರೇ ವಹಿಸಿಕೊಂಡಿದ್ದರು. ಇಂದು ಪೊಲೀಸರ ವಿರುದ್ಧ ನಡೆದ ಸಮಾವೇಶದಲ್ಲೂ ಡಿವೈಎಸ್‌ಪಿ ಶಿವಕುಮಾರ್‌ ಸಹ ಭಾಗಿಯಾಗಿದ್ದು ವಿಶೇಷವಾಗಿತ್ತು. ಚುನಾವಣೆಯಲ್ಲಿ ಒಕ್ಕಲಿಗರು ಹಾಲಿ ಶಾಸಕ ನಾರಾಯಣಸ್ವಾಮಿ ಪರ ಮತ ಚಲಾಯಿಸಿಲ್ಲ ಎಂದು ಈ ರೀತಿ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಕೇಸ್‌ ದಾಖಲಿಸಿ, ಒಕ್ಕಲಿಗರ ವಿರುದ್ಧ ತಮ್ಮ ಸೇಡು ತೀರಿಸಿಕೊಳ್ಳೋ ಪ್ರಯತ್ನ ಶಾಸಕರು ಮಾಡುತ್ತಿದ್ದಾರೆ ಅನ್ನೋದು ಒಕ್ಕಲಿಗ ಮುಖಂಡರ ಆರೋಪ. ಆದರೆ, ಈ ಆರೋಪ ತಳ್ಳಿಹಾಕಿರುವ ಶಾಸಕ ಎಸ್​ ಎನ್ ನಾರಾಯಣಸ್ವಾಮಿ, ನೀವು ಮಾಡಿರೋ ತಪ್ಪುಗಳಿಂದ ಕೇಸ್‌ ದಾಖಲಿಸಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ಆರೋಪ ಮಾಡಿ ಸಮುದಾಯದವರನ್ನು ಎತ್ತಿಕಟ್ಟಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಪೊಲೀಸ್‌ ಡಿವೈಎಸ್‌ಪಿ ಶಿವಕುಮಾರ್‌ ಹಾಗೂ ಶಾಸಕ ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ನಿವೃತ್ತಿ ಆಗುತ್ತಿರೋ ಶಿವಕುಮಾರ್‌ ಬೆನ್ನಿಗೆ ಒಕ್ಕಲಿಗ ಸಮುದಾಯ ನಿಂತಿದೆ.

ABOUT THE AUTHOR

...view details