ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಜೆಡಿಎಸ್ ನಾಯಕರು ಕೋಲಾರಕ್ಕೆ ಲಗ್ಗೆ ಇಟ್ಟಿದ್ದಾರೆ. ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯವನ್ನ ಮನವೋಲಿಸುವ ನಿಟ್ಟಿನಲ್ಲಿ ಇಂದು ಕೋಲಾರದಲ್ಲಿ ಸಾಮೂಹಿಕ ವಿವಾಹ ಹಾಗೂ ಸಂಕ್ರಾಂತಿ ಹಬ್ಬದ ನೆಪದಲ್ಲಿ ಸಂಘಟನೆಗೆ ಜೆಡಿಎಸ್ ಮುಂದಾಗಿದೆ.
ಈ ಕುರಿತು ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋಲಾರ ಜೆಡಿಎಸ್ನ ಭದ್ರಕೋಟೆ. ಕಳೆದ ಬಾರಿ ಶ್ರೀನಿವಾಸಗೌಡ ಜೆಡಿಎಸ್ ಪಕ್ಷದಿಂದ 80 ಸಾವಿರ ಮತಗಳಿಂದ ಗೆದ್ದಿದ್ದರು. ಈ ಬಾರಿ ಜೆಡಿಎಸ್ನಿಂದ ಸ್ಪರ್ಧಿಸುತ್ತಿರುವ ಶ್ರೀನಾಥ್ ಅವರಿಗೆ 70 ಸಾವಿರ ಮತಗಳು ಬರುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದಾಗಿ ಕೋಲಾರಕ್ಕೆ ಬಂದು ನಿಲ್ಲುತ್ತಿದ್ದಾರೆ. ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್‌ಗೆ ಮತ ಕೇಳುತ್ತಿದ್ದಾರೆ. ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಹಣ ಪಡೆದು ಬಿಜೆಪಿಗೆ ಮತ ಹಾಕಿಸಿದರು. ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿದರು, ಕುಪೇಂದ್ರ ರೆಡ್ಡಿ ಅವರನ್ನು ಸೋಲಿಸಿದರು ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಕೋಲಾರದಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ನೆಲೆಕಚ್ಚಿದೆ. ಕೆ.ಎಚ್.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡುವರಾ? ಎಂದು ಪ್ರಶ್ನಿಸಿದ ಅವರು ಕೋಲಾರದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು. ಅಲ್ಲದೇ ಇಲ್ಲಿ ಇಡೀ ಕಾಂಗ್ರೆಸ್ ಪಕ್ಷ ಸೇರಿ ಸಭೆ ಮಾಡಿದಾಗ ಸೇರಿದ ಜನ ಬರಿ 2 ಸಾವಿರ, 7 ಜನ ಶಾಸಕರು ಸೇರಿಕೊಂಡು ಜನರನ್ನು ಸೇರಿಸಲಾಗಿಲ್ಲ ಇದು ಜಿಲ್ಲೆಯಲ್ಲಿ ಕಾಂಗ್ರೆಸ್ ವರ್ಚಸ್ಸು ಕಳೆದುಕೊಂಡಿದೆ ಎಂಬುದನ್ನು ತೊರಿಸುತ್ತದೆ. ಸಿದ್ದರಾಮಯ್ಯ ಅವರು ಬಾದಾಮಿ ಗೆಲ್ಲಲು ನಾನು ಕಾರಣ, ಬಾದಾಮಿ ಚುನಾವಣೆಯಲ್ಲಿ ನಾನು ಹೋಂ ವರ್ಕ್ ಮಾಡಿದ್ದು, ಸಿದ್ದರಾಮಯ್ಯ ಅಲ್ಲ, ನಾನು ಅವರನ್ನು ಗೆಲ್ಲಿಸಿದೆ ಅದಕ್ಕೆ ಅವರ ಸರಿಯಾದ ಉಪಕಾರ ಮಾಡಿದರು ಎಂದು ಟೀಕಾ ಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಬಲವಂತಾವಗಿ ಕೋಲಾರಕ್ಕೆ ಬರುತ್ತಿದ್ದಾರೆ: ಸಿದ್ದರಾಮಯ್ಯರನ್ನು ಬಲವಂತವಾಗಿ ಕೋಲಾರಕ್ಕೆ ಬರುತ್ತಿದ್ದಾರೆ, ಕೊನೆಗೆ ಹೈಕಮಾಂಡ್ ಮೇಲೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲೆಂದೇ ಕೆಲವರು ಕೋಲಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು. ಇನ್ನೂ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಶ್ರೀನಾಥ ಅವರ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.