ಕೋಲಾರ: ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಶಾಸಕರನ್ನು ಮಾತ್ರ ಕರೆದು ಬಜೆಟ್ ಕುರಿತು ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಶಾಸಕ ನಂಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರೊಂದಿಗೆ ಮಾತ್ರ ಸಿಎಂ ಬಜೆಟ್ ಚರ್ಚೆ: ಶಾಸಕ ನಂಜೇಗೌಡ ಬೇಸರ - MLA Nanjegowda
ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರ ಬಳಿ ಮಾತ್ರ ಚರ್ಚೆ ನಡೆಸುತ್ತಿರುವುದು ಬೇಸರ ತಂದಿದೆ ಎಂದು ಮಾಲೂರು ಶಾಸಕ ನಂಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ನಂಜೇಗೌಡ ಬೇಸರ
ನಗರದಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಬರೀ ಬಿಜೆಪಿ ಶಾಸಕರನ್ನು ಕರೆದು ಅವರ ಕುಂದು-ಕೊರತೆಗಳನ್ನು ವಿಚಾರಿಸುತ್ತಿದ್ದಾರೆ. ನಾವೆಲ್ಲರೂ ಕರ್ನಾಟಕ ರಾಜ್ಯದ ಶಾಸಕರಾಗಿದ್ದು, ಮುಖ್ಯಮಂತ್ರಿಗಳು ಜಿಲ್ಲಾವಾರು ಪಕ್ಷಾತೀತವಾಗಿ ಶಾಸಕರನ್ನು ಕರೆದು ಚರ್ಚೆ ಮಾಡಬೇಕು.
ಆದರೆ ಮುಖ್ಯಮಂತ್ರಿಗಳು ಬಿಜೆಪಿಯವರನ್ನು ಮಾತ್ರ ಕರೆದು ಚರ್ಚೆ ಮಾಡುತ್ತಿರುವುದು ಬೇಸರದ ಸಂಗತಿ. ಮುಖ್ಯಮಂತ್ರಿಯಾಗಿ ಎಲ್ಲಾ ಶಾಸಕರನ್ನು ಸರಿಸಮನಾಗಿ ಕಾಣಬೇಕು ಎಂದರು.