ಕೋಲಾರ: ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದು ಬಾಲಕಿಯ ರಕ್ಷಣೆ ಮಾಡಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರದಲ್ಲಿ 6ನೇ ತರಗತಿ ಬಾಲಕಿಯ ಬಾಲ್ಯವಿವಾಹ ತಡೆದ ಅಧಿಕಾರಿಗಳು - kolar latest news updates
ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದು ಬಾಲಕಿಯನ್ನ ರಕ್ಷಣೆ ಮಾಡಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಜರುಗಿದೆ.
![ಕೋಲಾರದಲ್ಲಿ 6ನೇ ತರಗತಿ ಬಾಲಕಿಯ ಬಾಲ್ಯವಿವಾಹ ತಡೆದ ಅಧಿಕಾರಿಗಳು child marraige stopped in kolar](https://etvbharatimages.akamaized.net/etvbharat/prod-images/768-512-7598030-730-7598030-1592030811735.jpg)
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಕ್ರಾಸ್ನಲ್ಲಿರುವ ಸಂತೇ ಮೈದಾನದಲ್ಲಿ ಸುಮಾರು 50 ರಿಂದ 60 ಜನ ವಲಸಿಗರಿದ್ದು, 6ನೇ ತರಗತಿ ಓದುತ್ತಿದ್ದ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಇದನ್ನು ತಿಳಿದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಸಿಡಿಪಿಒ, ಎಸಿಡಿಪಿಒ, ಡಿಸಿಪಿಒ ಕಚೇರಿ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿಯವರು ವಳಗೇರನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಬಾಲ್ಯ ವಿವಾಹವನ್ನ ತಡೆದಿದ್ದಾರೆ. ಇದೇ ವೇಳೆ, ಬಾಲಕಿಯ ಪೋಷಕರಿಗೆ ಬಾಲ್ಯವಿವಾಹ ಮಾಡದಂತೆ ಜಾಗೃತಿ ಮೂಡಿಸಲಾಗಿದೆ.
ಇನ್ನು ಬಾಲಕಿಯನ್ನ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ ನಂತರ, ಕೆಜಿಎಫ್ನ ಮಸ್ಕಾ ನಗರದಲ್ಲಿರುವ ಬಾಲ ಮಂದಿರದಲ್ಲಿ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.