ಕೋಲಾರ:ಜಿಲ್ಲೆ ಬಂಗಾರಪೇಟೆ ತಾಲೂಕಿನ ಆರೋಹಳ್ಳಿ ಗ್ರಾಮದಲ್ಲಿಶೌಚಾಲಯದಲ್ಲಿ ಮಗು ಕೂಡಿ ಹಾಕಿ ನಿರ್ಲಕ್ಷ್ಯ ವಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯನ್ನು ವಜಾ ಮಾಡಲು ಶಿಫಾರಸು ಮಾಡಲಾಗಿದೆ.
ಹಾರೋಹಳ್ಳಿ ಅಂಗನವಾಡಿ ಶಿಕ್ಷಕಿ ಸುಧಾ ಹಾಗೂ ಸಹಾಯಕಿ ಶಾರದಾ ಎಂಬುವರ ನಿರ್ಲಕ್ಷ್ಯದಿಂದಾಗಿ, ಅಂಗನವಾಡಿಗೆ ಬಂದಿದ್ದ ಮಗುವನ್ನು ಶೌಚಾಲಯಲ್ಲಿಯೇ ಬಿಟ್ಟು ಬೀಗ ಹಾಕಿಕೊಂಡು ಬರಲಾಗಿತ್ತು. ನಂತರ ಪೋಷಕರು ಮಗುವನ್ನು ಹುಡುಕಾಟ ನಡೆಸಿದಾಗ ಸಂಜೆ ವೇಳೆಗೆ ಅಂಗನವಾಡಿಯಲ್ಲಿ ಮಗು ಪತ್ತೆಯಾಗಿತ್ತು.
ಶೌಚಾಲಯದಲ್ಲಿ ಮಗು ಕೂಡಿ ಹಾಕಿದ ಪ್ರಕರಣ: ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ವಜಾಕ್ಕೆ ಶಿಫಾರಸ್ಸು ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಸಿಡಿಪಿಒ ಮುನಿರಾಜು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಶಾರದಾ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಶಿಕ್ಷಕಿ ಹಾಗೂ ಸಹಾಯಕಿ ಇಬ್ಬರನ್ನೂ ಕಡ್ಡಾಯ ರಜೆ ಮೇಲೆ ಕಳಿಸಿದ್ದು, ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೋಲಾರ ಅಂಗನವಾಡಿ ಶೌಚಾಲಯದಲ್ಲಿ ಮಗು ಲಾಕ್.. ಶಿಕ್ಷಕಿ ಸಹಾಯಕಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಕಿಡಿ