ಕರ್ನಾಟಕ

karnataka

ETV Bharat / state

ಕೋವಿಡ್​ ಎಫೆಕ್ಟ್​.. ಕಷ್ಟಪಟ್ಟು ಬೆಳೆಸಿದ ಬೆಳೆಯನ್ನೇ ನಾಶಪಡಿಸಿದ ರೈತ.. - ಕೋಲಾರದಲ್ಲಿ ಕ್ಯಾಪ್ಸಿಕಂ ಬೆಳೆ ನಾಶ,

ಕಟಾವಿಗೆ ಬಂದಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆಯನ್ನ ಕಿತ್ತುಹೊಗೆಯುತ್ತಿದ್ದಾರೆ. ಬೆಳೆ ಬೆಳೆಯುವುದಕ್ಕೆ ಸುಮಾರು 4 ಲಕ್ಷ ಖರ್ಚಾಗಿದ್ದು, ಬೆಲೆ ಇಲ್ಲದ ಕಾರಣ ನಷ್ಟವಾಗಿದೆ..

Capsicum crop loss by corona effect, Capsicum crop loss by corona effect in Kolar, Capsicum crop loss, Capsicum crop loss news, ಕ್ಯಾಪ್ಸಿಕಂ ಬೆಳೆ ನಾಶ, ಕೋಲಾರದಲ್ಲಿ ಕ್ಯಾಪ್ಸಿಕಂ ಬೆಳೆ ನಾಶ, ಕೋಲಾರದಲ್ಲಿ ಕ್ಯಾಪ್ಸಿಕಂ ಬೆಳೆ ನಾಶ ಸುದ್ದಿ,
ಕಷ್ಟಪಟ್ಟು ಬೆಳೆಸಿದ ಬೆಳೆಯನ್ನೇ ನಾಶ ಪಡಿಸಿದ ರೈತ

By

Published : Apr 28, 2021, 11:43 AM IST

ಕೋಲಾರ :ಕೊರೊನಾ ರೈತನ ಬದುಕಿನಲ್ಲಿ ಕೊಳ್ಳಿ ಇಟ್ಟಿದೆ. ಕೊರೊನಾ ಪ್ರಭಾವದಿಂದಾಗಿ ರೈತ ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ‌ ಇಲ್ಲದೆ, ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಷ್ಟಪಟ್ಟು ಬೆಳೆಸಿದ ಬೆಳೆಯನ್ನೇ ನಾಶಪಡಿಸಿದ ರೈತ..

ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಅಂಬರೀಶ್ ಎಂಬ ರೈತ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆದಿದ್ದು, ಕೊರೊನಾದಿಂದಾಗಿ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ.

ಅಲ್ಲದೆ ಕೊರೊನಾದಿಂದಾಗಿ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ‌.

ಕಟಾವಿಗೆ ಬಂದಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆಯನ್ನ ಕಿತ್ತುಹೊಗೆಯುತ್ತಿದ್ದಾರೆ. ಬೆಳೆ ಬೆಳೆಯುವುದಕ್ಕೆ ಸುಮಾರು 4 ಲಕ್ಷ ಖರ್ಚಾಗಿದ್ದು, ಬೆಲೆ ಇಲ್ಲದ ಕಾರಣ ನಷ್ಟವಾಗಿದೆ.

ಜೊತೆಗೆ ಕೊರೊನಾದಿಂದ ಕೈಸುಟ್ಟಿಕೊಂಡಿರುವ ರೈತನ ಸಂಕಷ್ಟಕ್ಕೆ ಧಾವಿಸಬೇಕೆಂದು, ಸೂಕ್ತ ರೀತಿಯ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.

ABOUT THE AUTHOR

...view details