ಕೋಲಾರ: ತಾಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿ ಕೂತಾಂಡಹಳ್ಳಿ ಕ್ಷೇತ್ರದಲ್ಲಿ ಕೇವಲ ಎರಡು ಮತಗಳಿಂದ ಸೋತ ಅಭ್ಯರ್ಥಿ ಮರು ಎಣಿಕೆಗೆ ಒತ್ತಾಯಿಸಿದ್ದಾರೆ.
ಮರು ಎಣಿಕೆಗೆ ಪರಾಜಿತ ಅಭ್ಯರ್ಥಿ ಒತ್ತಾಯ ಅಭ್ಯರ್ಥಿಗಳಾದ ಶ್ರೀನಿವಾಸ 103 ಮತಗಳನ್ನ ಪಡೆದರೆ, ವಿಜಯಬಾಬು ಎಂಬಾತ 101 ಮತಗಳನ್ನ ಪಡೆದು ಕೇವಲ ಎರಡು ಮತಗಳಲ್ಲಿ ಸೋತಿದ್ದ ಹಿನ್ನೆಲೆ ಮರು ಎಣಿಕೆಗೆ ಒತ್ತಾಯಿಸಿದ್ದಾರೆ.
ಓದಿ: ಸಮಬಲದ ಹೋರಾಟ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ 'ಲಾಟರಿ'..!
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮ ಪಂಚಾಯಿತಿಯ ದಿನ್ನೇಕೊತ್ತೂರು ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸಮ ಮತಗಳನ್ನ ಪಡೆದುಕೊಂಡ ಹಿನ್ನೆಲೆ ಲಾಟರಿ ಎತ್ತುವ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಯಿತು.
ಅಭ್ಯರ್ಥಿಗಳಾದ ಅರುಣ್ ರೆಡ್ಡಿ, ಶ್ರೀರಾಮರೆಡ್ಡಿ ಎಂಬುವರು ತಲಾ 106 ಮತಗಳನ್ನ ಪಡೆದುಕೊಂಡಿದ್ದು, ತಹಶಿಲ್ದಾರ್ ದಯಾನಂದ್ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.