ಕರ್ನಾಟಕ

karnataka

ETV Bharat / state

ಬೀಗ ಮುರಿದು ಕೆನರಾ ಬ್ಯಾಂಕ್​ಗೆ ಕನ್ನ: ಈ ಕಳ್ಳರು ದೋಚಿದ್ದೆಷ್ಟು ಗೊತ್ತಾ..? - ಕೋಲಾರದ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ

ಬ್ಯಾಂಕ್​ನಲ್ಲಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿಲ್ಲರೆ ನಾಣ್ಯವನ್ನ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾರೆ. ಅಷ್ಟೇ ಅಲ್ಲ, ಬ್ಯಾಂಕ್ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದೆ.

ಬೀಗ ಮುರಿದು ಕೆನರಾ ಬ್ಯಾಂಕ್​ಗೆ ಕನ್ನ
ಬೀಗ ಮುರಿದು ಕೆನರಾ ಬ್ಯಾಂಕ್​ಗೆ ಕನ್ನ

By

Published : Aug 27, 2021, 5:50 PM IST

ಕೋಲಾರ: ಬೀಗ ಮುರಿದು ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ ಮಾಡಿರೋ ಘಟನೆ ಜಿಲ್ಲೆಯ, ತಾಲೂಕಿನ ಮದನಹಳ್ಳಿ ಬ್ರ್ಯಾಂಚ್​ನಲ್ಲಿ ನಡೆದಿದೆ. ಕಳೆದ ರಾತ್ರಿ ಕಳ್ಳರ ತಂಡವೊಂದು ಈ ಕೃತ್ಯ ನಡೆಸಿದ್ದಾರೆ, ಕಳ್ಳತನ ಮಾಡುವ ವೇಳೆ, ಸಿಸಿ ಕ್ಯಾಮರಾ ಹಾಗೂ ಸೈರನ್​ನ ಸಂಪರ್ಕ ಕಡಿತಗೊಳಿಸಿ ಕಳ್ಳತನ ಮಾಡಿದ್ದಾರೆ.

ಬ್ಯಾಂಕ್​ನಲ್ಲಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿಲ್ಲರೆ ನಾಣ್ಯವನ್ನ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾರೆ. ಅಷ್ಟೇ ಅಲ್ಲ, ಬ್ಯಾಂಕ್ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಅದು ವಿಫಲವಾಗಿದೆ. ಸದ್ಯ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಟಮಕ ಬಳಿ ಇರುವ ಇಂಡಿಯಾ ಎಟಿಎಂ ಹಾಗೂ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮವೊಂದರಲ್ಲಿ ಎಟಿಎಂ ಗಳಿಗೆ ಗ್ಯಾಸ್ ಕಟ್ಟರ್ ಬಳಿಸಿ ಹಣ ದೋಚಿ ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೇ ಮದಹಳ್ಳಿ ಬಳಿ ಕೆನಾರ್ ಬ್ಯಾಂಕ್​​​​ಗೆ ಕನ್ನ ಹಾಕುವ ಮೂಲಕ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ.

ಇದನ್ನೂ ಓದಿ : ಜಿಮ್ ಟ್ರೈನರ್ ಬರ್ಬರ ಕೊಲೆ : ಹುಡುಗಿ ವಿಚಾರಕ್ಕೆ ನಡೆಯಿತಾ ಈ ಕೃತ್ಯ?

ABOUT THE AUTHOR

...view details