ಕರ್ನಾಟಕ

karnataka

ETV Bharat / state

ಮುತ್ಸದ್ದಿ ರಾಜಕಾರಣಿ ಆರ್​.ಎಲ್.ಜಾಲಪ್ಪ ನಡೆದು ಬಂದ ಹಾದಿ.. - ಮಾಜಿ ಸಚಿವ ಆರ್.ಎಲ್​.ಜಾಲಪ್ಪ ನಿಧನ

ಕರ್ನಾಟಕದ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಕೇಂದ್ರದ ಮಾಜಿ ಸಚಿವ ಆರ್.ಎಲ್​.ಜಾಲಪ್ಪ ಅವರು (97) ಇಂದು ಇಹಲೋಕ ತ್ಯಜಿಸಿದರು.

RLJalappa died,ಆರ್​.ಎಲ್.ಜಾಲಪ್ಪ ಸಾವು
ಆರ್​.ಎಲ್.ಜಾಲಪ್ಪ

By

Published : Dec 17, 2021, 8:51 PM IST

ಕೋಲಾರ: ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಆರ್.ಎಲ್​.ಜಾಲಪ್ಪ (97) ಇಂದು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾಂಗ್ರೆಸ್​ ಹಾಗೂ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕರ್ನಾಟಕದ ಮುತ್ಸದ್ದಿ ರಾಜಕಾರಣಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದವರು.

ಇವರ ಪೂರ್ಣ ಹೆಸರು ಆರ್.ಲಕ್ಷ್ಮಿ ನಾರಾಯಣಪ್ಪ ಜಾಲಪ್ಪ. 1925ರ ಅಕ್ಟೋಬರ್ 19 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಜನಿಸಿದರು. ಇವರು ಪತ್ನಿ ವಿಜಯಲಕ್ಷ್ಮಿ, 3 ಗಂಡು ಹಾಗೂ 4 ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.

ಮಹಾರಾಜ ಕಾಲೇಜು ಮೈಸೂರಿನಲ್ಲಿ ಬಿಎ ಪಡೆದ ಪಡೆದ ಇವರು. ಕಾಂಗ್ರೆಸ್​ನ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 1996 ರಿಂದ 2009 ರ ವರೆಗೆ 4 ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಸದಸ್ಯರಾಗಿ ಆಯ್ಕೆ ಆಗಿದ್ದರು. ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1996 ರಿಂದ 98ರ ವರೆಗೆ ಕೇಂದ್ರ ಜವಳಿ(ಟೆಕ್ಸ್ ಟೈಲ್) ಖಾತೆ ರಾಜ್ಯ ಸಚಿವರಾಗಿದ್ದರು.

ದೇವರಾಜು ಅರಸು ಜೊತೆ ನಂಟು:

ದೇವರಾಜ ಅರಸು ಅವರೊಂದಿಗೆ ಬೆಳೆದು ಬಂದಿರುವ ಜಾಲಪ್ಪ ಅವರು 1979 ರಲ್ಲಿ ಕರ್ನಾಟಕ ಕ್ರಾಂತಿ ರಂಗ ಪ್ರವೇಶಿಸಿದ್ದರು. ಬಳಿಕ ಅರಸು ಅವರೊಂದಿಗೆ 1980 ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆಯಾದರು. ನಂತರ 1989 ರಲ್ಲಿ ಜನತಾ ದಳ ಸೇರಿದರು.

ಸದಾನಂದಗೌಡರ ಜೊತೆ ಆರ್​.ಎಲ್.ಜಾಲಪ್ಪ

ಈಡಿಗ ಸಮುದಾಯದವರಾಗಿರುವ ಜಾಲಪ್ಪ, ಮೊದಲಿಗೆ ದೊಡ್ಡಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸಹಕಾರ ಹಾಗೂ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜಕಾರಣ, ಕೃಷಿ, ಶಿಕ್ಷಣ ಕ್ಷೇತ್ರದಲ್ಲೂ ಅವರು ಆಸಕ್ತಿ ಹೊಂದಿದ್ದರಿಂದ ದೇವರಾಜ ಅರಸ್ ಮೆಡಿಕಲ್ ಕಾಲೇಜು ಹಾಗೂ ಆರ್.ಎಲ್ ಜಾಲಪ್ಪ ಸಂಶೋಧನಾ ಕೇಂದ್ರ ಆರಂಭಿಸಿದ್ದರು.

ಜಾಲಪ್ಪ ಅವರು 4 ಬಾರಿ ಲೋಕಸಭೆಯ ಸದಸ್ಯರು ಮತ್ತು ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಇವರು, ಬಳಿಕ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.

ಜಾಲಪ್ಪ ರಾಜಕೀಯ ಹಾದಿ:

1980-83 - ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

1983-96 - ಸದಸ್ಯರು, ಕರ್ನಾಟಕ ವಿಧಾನಸಭೆ

1983-84 ಮತ್ತು 1985-86 - ಸಹಕಾರ ಸಚಿವ, ಕರ್ನಾಟಕ ಸರ್ಕಾರ

1986-87 - ಗೃಹ ವ್ಯವಹಾರಗಳ ಸಚಿವ, ಕರ್ನಾಟಕ ಸರ್ಕಾರ

1995-96 - ಕಂದಾಯ ಸಚಿವ, ಕರ್ನಾಟಕ ಸರ್ಕಾರ

1996-98 - ಜವಳಿ ಸಚಿವ, ಕೇಂದ್ರ ಸರ್ಕಾರ

1998 - 12ನೇ ಲೋಕಸಭೆಗೆ ಮರುಚುನಾಯಿತರಾದರು

1998-99 - ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ

1999 - 13 ನೇ ಲೋಕಸಭೆಗೆ ಆಯ್ಕೆ

199-2000 - ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು

2004 - 14ನೇ ಲೋಕಸಭೆಗೆ ಆಯ್ಕೆ

2006 - ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು

ABOUT THE AUTHOR

...view details