ಕರ್ನಾಟಕ

karnataka

ETV Bharat / state

15 ವಿದೇಶಿಗರ ಕೊರೊನಾ ಪರೀಕ್ಷಾ ವರದಿ ನೆಗಟಿವ್​​... ಕೋಲಾರದಲ್ಲಿಲ್ಲ ಮಾಹಾಮಾರಿ ಆತಂಕ - ನೆರೆ ರಾಜ್ಯದಿಂದ ಬಂದಂತಹವರ ಮೇಲೆ ನಿಗಾ

ಹೊರದೇಶದಿಂದ ಬಂದಂತಹ 15 ಜನರ ರಕ್ತದ ಮಾದರಿ ಪರಿಶೀಲಿಸಲಾಗಿದ್ದು, ನಮ್ಮಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾಹಿತಿ ನೀಡಿದ್ದಾರೆ.

KN_KLR_1_DC_SATHYABHAMA-AVB_7205620
ಹೊರದೇಶದಿಂದ ಬಂದ 15 ಜನರ ರಕ್ತ ಪರೀಕ್ಷೆ ಮಾಡಿದ್ದು, ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ: ಸತ್ಯಭಾಮ

By

Published : Mar 12, 2020, 4:56 PM IST

Updated : Mar 12, 2020, 7:25 PM IST

ಕೋಲಾರ:ಹೊರದೇಶದಿಂದ ಬಂದಂತಹ 15 ಜನರ ರಕ್ತದ ಮಾದರಿ ಪರಿಶೀಲಿಸಲಾಗಿದ್ದು, ನಮ್ಮಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರದೇಶದಿಂದ ಬಂದಂತಹ 15 ಜನರಲ್ಲಿ, ಹನ್ನೆರಡು ಜನರಿಗೆ ರಕ್ತಪರೀಕ್ಷೆ ಮಾಡಲಾಗಿದ್ದು, ಈಗಾಗಲೇ ಹನ್ನೊಂದು ಜನರ ವರದಿ ಬಂದಿದೆ ಎಂದರು. ಅಲ್ಲದೆ ಇವರಲ್ಲಿ ಯಾವುದೇ ಕೊರೊನಾ ಲಕ್ಷಣಗಳಿಲ್ಲ, ಇನ್ನು ಅಮೆರಿಕದಿಂದ ಬಂದಂತಹ ಒಬ್ಬ ವ್ಯಕ್ತಿಯ ವರದಿ ಬರಬೇಕಿದೆ ಎಂದು ತಿಳಿಸಿದರು.

ಹೊರದೇಶದಿಂದ ಬಂದ 15 ಜನರ ರಕ್ತ ಪರೀಕ್ಷೆ ಮಾಡಿದ್ದು, ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ: ಸತ್ಯಭಾಮ

ಇನ್ನು ಹೊರದೇಶದಿಂದ ಬಂದವರಲ್ಲಿ ಜಪಾನ್-5, ಇಟಲಿ-2, ಥಾಯ್ಲೆಂಡ್​-2, ಸೌತ್ ಕೊರಿಯಾ-5, ಹಾಗೂ ಯುಎಸ್‌ನಿಂದ ಒಬ್ಬ ವ್ಯಕ್ತಿ ಕೋಲಾರಕ್ಕೆ ಬಂದಿದ್ದು, ಸೌತ್ ಕೊರಿಯಾದಿಂದ ಬಂದಂತಹ ಮೂವರು ವ್ಯಕ್ತಿಗಳು ನಮ್ಮ ವ್ಯಾಪ್ತಿಗೆ ಸಿಗದ ಹಿನ್ನೆಲೆ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದರು. ಇನ್ನು ಮುಂಜಾಗೃತ ಕ್ರಮವಾಗಿ ಕೋಲಾರ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಜ್ವರ, ಉಸಿರಾಟದ ತೊಂದರೆ ಕಂಡು ಬಂದಲ್ಲಿ ಸುಮಾರು 25 ದಿನಗಳ ಕಾಲ ನಿಗಾ ಘಟಕದಲ್ಲಿರಿಸಿ ನಂತರ ಬಿಡುಗಡೆಗೊಳಿಸಲಾಗುವುದು.

ನೆರೆ ರಾಜ್ಯದಿಂದ ಬಂದಂತಹವರ ಮೇಲೆ ನಿಗಾವಹಿಸಿದ್ದು, ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶಗಳ ಮೇಲೂ ನಿಗಾವಹಿಸಲಾಗಿದೆ. ಹೊರದೇಶದಿಂದ ಬರುವಂತಹ ಸಿಇಓ ಅಧಿಕಾರಿಗಳು ಸೇರಿದಂತೆ ಕಾರ್ಮಿಕರನ್ನ ಸಹ ತಪಾಸಣೆಗೊಳಪಡಿಸಲಾಗುವುದು ಎಂದು ಹೇಳಿದರು.

Last Updated : Mar 12, 2020, 7:25 PM IST

ABOUT THE AUTHOR

...view details