ಕೋಲಾರ :ದೇಶದಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ದೇಶದ 543 ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಸಂಬಂಧ ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾದಯಾತ್ರೆಗೆ ಚಾಲನೆ ನೀಡಿದ್ರು. ಗಾಂಧಿ ಆಶಯದಂತೆ ಸ್ವಚ್ಚ ಭಾರತ, ಮದ್ಯ ವ್ಯಸನ ಮುಕ್ತ ಸಮಾಜ, ಗೋಪೂಜೆ, ಗಂಗಾನದಿ ಶುಚಿ ಮಾಡುವುದು ಸೇರಿದಂತೆ ಬಯಲು ಬಹಿರ್ದೇಸೆ ಮುಕ್ತ ಸಮಾಜ, ರಾಮರಾಜ್ಯ ಮಾಡುವುದು ಈ ಪಾದಯಾತ್ರೆ ಉದ್ದೇಶ ಹೊಂದಿದೆ. ನಗರದ ಬೈಪಲ್ಲಿ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲ್ ನೂರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಪಾದಯಾತ್ರೆ ನಡೆಸಿದ್ರು.