ಕರ್ನಾಟಕ

karnataka

ETV Bharat / state

ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಇರಲ್ಲ: ಕೆ.ಹೆಚ್.ಮುನಿಯಪ್ಪ

ಹಾಲಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಸಂಸದ ಮುನಿಸ್ವಾಮಿ ಇನ್ನು ಮುನಿಸಿಪಾಲಿಟಿ ಲೆವೆಲ್‍ನಲ್ಲಿದ್ದಾರೆ ಎಂದು ಟಾಂಗ್​ ನೀಡಿದ್ದಾರೆ.

KH Muniyappa , ಕೆ.ಹೆಚ್.ಮುನಿಯಪ್ಪ,

By

Published : Nov 16, 2019, 9:21 PM IST

ಕೋಲಾರ:ಹಾಲಿ ಸಂಸದ ಮುನಿಸ್ವಾಮಿ ಇನ್ನು ಮುನಿಸಿಪಾಲಿಟಿ ಲೆವೆಲ್‍ನಲ್ಲಿದ್ದಾರೆ. ಸಂಸದರಾಗಿ ಅವರು ದೇಶದ ಸಂಸತ್ತ​ನ್ನು ಪ್ರತಿನಿಧಿಸುತ್ತಿದ್ದು, ಯಾವುದೇ ಆರೋಪವನ್ನು ಮಾಡುವ ಮೊದಲು ಮಾಹಿತಿ ಪಡೆಯಬೇಕು ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಟಾಂಗ್​ ನೀಡಿದ್ದಾರೆ.

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ

ನಗರದ ಹಾರೋಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದ ಮುನಿಸ್ವಾಮಿ ಇನ್ನು ಮುನಿಸಿಪಾಲಿಟಿ ಲೆವೆಲ್‍ನಲ್ಲಿದ್ದಾರೆ. ಸಂಸದರಾಗಿ ಅವರು ದೇಶದ ಸಂಸತ್ತ​ನ್ನು ಪ್ರತಿನಿಧಿಸುತ್ತಿದ್ದು, ಯಾವುದೇ ಆರೋಪವನ್ನು ಮಾಡುವ ಮೊದಲು ಮಾಹಿತಿ ಪಡೆದು ಮಾಡಬೇಕು ಎಂದರು.

ನಾನು ಅವರ ಹೇಳಿಕೆಗೆಳಿಗೆ ಪ್ರತಿಕ್ರಿಯೆ ನೀಡಲ್ಲ. ಎಲ್ಲಿ ಬೇಕಾದರೂ ದೂರು ನೀಡಲಿ, ಎಲ್ಲಿ ಬೇಕಾದರೂ ತನಿಖೆ ನಡೆಸಲಿ. ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ. ಚುನಾವಣೆ ಸಮಯದಲ್ಲಿ ನನ್ನ ಆಸ್ತಿ ವಿವರ ಸಲ್ಲಿಸಿದ್ದೇನೆ. ಇನ್ನೂ ನಿನ್ನೆ ಕೆ.ಹಚ್.ಮುನಿಯಪ್ಪ ಅಕ್ರಮ ಆಸ್ತಿ ವಿಚಾರ ತನಿಖೆಯಾಗಬೇಕು ಎಂದಿದ್ದ ಮುನಿಸ್ವಾಮಿಗೆ ಮಾಜಿ ಸಂಸದ ಮುನಿಯಪ್ಪ ಟಾಂಗ್ ನೀಡಿದರು.

ಇನ್ನು ಉಪಚುನವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಉಪ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಇರೋದಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಬೆಂಬಲ ಇಲ್ಲ, ಇದು ಹೆಚ್ಚು ದಿನ ಉಳಿಯೋದಿಲ್ಲ ಎಂದು ಮಾಜಿ ಸಂಸದರು ಭವಿಷ್ಯ ನುಡಿದರು.

ಇನ್ನೂ ಜೆಡಿಎಸ್ ವರಿಷ್ಠ ದೇವೇಗೌಡ ಬಿಜೆಪಿಗೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ಜೆಡಿಎಸ್ ಜಾತ್ಯಾತೀತ ಪಕ್ಷ ಎಂದು ಗುರುತಿಸಿಕೊಂಡಿದೆ. ಬಹುಶ: ಬೆಂಬಲ ನೀಡೋದಿಲ್ಲ ಎಂದು ಭಾವಿಸಿದ್ದೇನೆ. ಅವರು ಯಾವ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.

ಇನ್ನೂ ಕಾಂಗ್ರೆಸ್​ಲ್ಲಿ ಯಾವುದೇ ಗೊಂದಲ, ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್​ ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ಎದುರಿಸಲಿದೆ ಎಂದು ತಿಳಿಸಿದರು.

ABOUT THE AUTHOR

...view details