ಕೋಲಾರ : ಬಿಜೆಪಿ ಸರ್ಕಾರ ಇರುವ ಸತ್ಯವನ್ನ ಹೇಳುವುದಿಲ್ಲ. ಅವರು ಮಾನಗೆಟ್ಟ ಜನರು ಎಂದು ನಗರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ಜಿಲ್ಲೆಯ ಕೆಜಿಎಫ್ನಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯನ್ನ ತಡೆಯುವಲ್ಲಿ ಯಡಿಯೂರಪ್ಪ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಜ್ಞರ ವರದಿಯನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಆಕ್ಸಿಜನ್, ಬೆಡ್ ವ್ಯವಸ್ಥೆ ಸೇರಿದಂತೆ ಆ್ಯಂಬುಲೆನ್ಸ್ ಸಿದ್ದತೆಯನ್ನ ಮಾಡಿಕೊಳ್ಳಬೇಕಿತ್ತು. ಇದ್ದ ಸತ್ಯವನ್ನ ಹೇಳಲಿಲ್ಲ. ಇಷ್ಟೊಂದು ಸುಳ್ಳು ಹೇಳಿದ ಮಾನಗೆಟ್ಟವರನ್ನ ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಾಕ್ಟರ್ ಎನಿಸಿಕೊಂಡ ಮಂತ್ರಿಯ ಸುಳ್ಳು ಮಾತುಗಳು
ಆರೋಗ್ಯ ಸಚಿವರ ವಿರುದ್ದ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, ರಾಜ್ಯಕ್ಕೆ ಪ್ರತಿದಿನ 1700 ಟನ್ ಆಕ್ಸಿಜನ್ ಬೇಕಾಗಿದೆ. ಆದರೆ, ಕೇವಲ 800 ಟನ್ ಆಕ್ಸಿಜನ್ ಮಾತ್ರ ನೀಡುತ್ತಿದ್ದಾರೆಂದರು.