ಕೋಲಾರ : ಭಾರತ ಜೋಡೋ ಯಾತ್ರೆ ಮುಗಿದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದರಂತೆ ಇಂದು ಬೆಳಗ್ಗೆ ಕೋಲಾರ ವಿಧಾನ ಸಭಾ ಕ್ಷೇತ್ರದ ತಾಲೂಕು ಭೋವಿ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಕೋಲಾರಕ್ಕೆ ಬರುವಂತೆ ಒತ್ತಾಯ ಮಾಡಿದರು.
ಇಂದು ಸಿದ್ದರಾಮಯ್ಯ ಅವರು ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವ ವೇಳೆ ಕೋಲಾರದ ಮುಖಂಡರು ಭೇಟಿ ಮಾಡಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಭೋವಿ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರಿಗೆ ಹೂ ಮಾಲೆ ಹಾಕಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದರು.