ಕೋಲಾರ: ಬೆಮೆಲ್ ಕಾರ್ಖಾನೆಗೆ ಕೆಲಸಕ್ಕೆ ಬರುವಂತೆ ಕಾರ್ಮಿಕರಿಗೆ ಬುಲಾವ್ ನೀಡಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕಾರ್ಮಿಕರನ್ನ ವಾಪಸ್ ಕಳುಹಿಸಿದ್ದಾರೆ.
ಕೆಲಸಕ್ಕೆ ಬರುವಂತೆ ಬೆಮೆಲ್ ಬುಲಾವ್: ಕಾರ್ಮಿಕರನ್ನು ವಾಪಸ್ ಕಳಿಸಿದ ಪೊಲೀಸರು - ಕಾರ್ಮಿಕರನ್ನು ವಾಪಸ್ ಕಳಿಸಿದ ಪೊಲೀಸರು
ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗುವಂತೆ ಬೆಮಲ್ ಕರೆ ನೀಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಮಿಕರನ್ನು ಮರಳಿ ಮನೆಗೆ ಕಳುಹಿಸಿದ್ದಾರೆ.
ಕೆಲಸಕ್ಕೆ ಬರುವಂತೆ ಬೆಮೆಲ್ ಬುಲಾವ್
ಜಿಲ್ಲೆಯ ಕೆಜಿಎಫ್ನಲ್ಲಿರುವ ಬೆಮೆಲ್ ಕಾರ್ಖಾನೆಯವರು ಕಾರ್ಮಿಕರು ಕೆಲಸಕ್ಕೆ ಬರುವಂತೆ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಕಾರ್ಖಾನೆಗೆ ಬಂದಂತಹ ಕಾರ್ಮಿಕರನ್ನ ಪೊಲೀಸರು ವಾಪಸ್ ಮನೆಗೆ ಕಳುಹಿಸಿದರು. ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ಕಾರ್ಖಾನೆ ಆರಂಭಿಸಲು ಮುಂದಾದ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಕಾರ್ಖಾನೆ ತೆರೆಯದಂತೆ ಮೌಖಿಕ ಆದೇಶ ನೀಡಲಾಗಿದೆ.
ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬೆಮೆಲ್ ಕಾರ್ಖಾನೆ, ಅನುಮತಿ ಪಡೆಯುವ ಮೊದಲೇ ಕಾರ್ಮಿಕರನ್ನ ಕೆಲಸಕ್ಕೆ ಬರುವಂತೆ ಬುಲಾವ್ ನೀಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Last Updated : Apr 15, 2020, 1:10 PM IST