ಕರ್ನಾಟಕ

karnataka

ETV Bharat / state

ಇಬ್ಬರು ಬೈಕ್​ ಕಳ್ಳರ ಬಂಧನ: ಬಂಗಾರಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ - ಕೋಲಾರ ಬೈಕ್ ಕಳ್ಳರು

ಕೇರಳ ಮೂಲದ ಇಬ್ಬರು ಬೈಕ್ ಕಳ್ಳರನ್ನ ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 9 ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ.

kolar
ಕೋಲಾರದ ಬಂಗಾರಪೇಟೆ ಪೊಲೀಸರು

By

Published : Jul 16, 2021, 7:29 AM IST

ಕೋಲಾರ: ಇಲ್ಲಿನ ಬಂಗಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಇಬ್ಬರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 9 ಬೈಕ್​ಗಳನ್ನ ವಶಕ್ಕೆ ಪಡೆದಿದ್ದು, ರೆಹಮಾನ್ ಹಾಗೂ ಅಮೀರ್ ಎಂಬವರನ್ನು ಅರೆಸ್ಟ್​ ಮಾಡಿದ್ದಾರೆ.

ಬಂಗಾರಪೇಟೆ ಪೊಲೀಸರು ವಾಹನಗಳನ್ನ ತಪಾಸಣೆ ನಡೆಸುವ ವೇಳೆ, ಬೈಕ್ ಖದೀಮರು ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅನುಮಾನಗೊಂಡ ಅವರನ್ನು ಪೊಲೀಸರು ಚೇಸ್ ಮಾಡಿ ಸೆರೆ ಹಿಡಿದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಸುಮಾರು 8 ಲಕ್ಷ ಮೌಲ್ಯದ 9 ಬೈಕ್​ಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

ಈ ಇಬ್ಬರು ಬೈಕ್ ಕಳ್ಳರು ಬೆಂಗಳೂರಿನ ಶೇಷಾದ್ರಿಪುರಂ, ಕಾಟನ್​ಪೇಟೆ, ರಾಜಾಜಿನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಕೆಜಿಎಫ್ ಎಸ್​ಪಿ ಇಲಕ್ಕಿಯಾ ಕರುಣಾಕರ್ ಹಾಗೂ ಡಿವೈಎಸ್ಪಿಸ್​ಪಿ ಮುರಳೀಧರ್ ಅವರ ಮಾರ್ಗದರ್ಶದಲ್ಲಿ ಬಂಗಾರಪೇಟೆ ಸಿಪಿಐ ಬಿ.ಸುನೀಲ್ ಕುಮಾರ್, ಎಸ್‌ಐ ಆರ್.ಜಗದೀಶ್ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ABOUT THE AUTHOR

...view details